ನೊಂದ ಮೋದಿ ಅಭಿಮಾನಿಯಿಂದ ಬಹಿರಂಗ ಪತ್ರ…


ಬಹಿರಂಗ ಪತ್ರ...

ದಯವಿಟ್ಟು ಇದನ್ನು ನಮ್ಮ ಪ್ರಧಾನಮಂತ್ರಿಗಳಿಗೆ ತಲುಪಿಸಿ…

ನಮಸ್ಕಾರ ಮೋದಿಜೀ…

ಕಾಂಗ್ರೇಸ್ ನವರು 60 ವರ್ಷ ದೇಶವನ್ನು ಲೂಟಿ ಮಾಡಿದ್ದಾರೆಂದು ನೀವು ತಿಳಿಸಿದಿರಿ…
ನಾನೂ ಕೂಡ ಕಾಂಗ್ರೇಸ್ ಕಳ್ಳ ಹಾಗೂ ಭ್ರಷ್ಟರಿಂದ ದೇಶವನ್ನು ರಕ್ಷಿಸಬೇಕೆಂದು …
ಬದಲಾವಣೆಗಾಗಿ ಮೋದಿಜೀಯವರನ್ನು ಏನಾದರೂ ಮಾಡಿ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂದು ಹಗಲಿರುಳು ಕಷ್ಟ ಪಟ್ಟು ದುಡಿದೆ…
ಕೊನೆಗೊಂದು ದಿನ ನಿಮ್ಮನ್ನು ಪ್ರಧಾನಮಂತ್ರಿ ಹುದ್ದೆಯಲ್ಲಿ ಕಂಡೆ…

■ ಪ್ರಧಾನಿಯಾದ ತಕ್ಷಣ ಪಾಕಿಸ್ತಾನವನ್ನು ಚಿಂದಿ ಉಡಾಯಿಸುತ್ತೀರಾ ಅಂದುಕೊಂಡೆ…
ಆದರೆ ನೀವು ಪಾಕಿಸ್ತಾನದ ಪ್ರಧಾನಿಯ ಮನೆಗೆ ಹೋಗಿ ಬಿರಿಯಾನಿ ತಿಂದು ಬಂದಿರಿ…

ಇದನ್ನು ವಿರೋಧಿಸಿದವರಿಗೆ ತಕ್ಕ ಉತ್ತರ ಕೊಟ್ಟು ನಿಮ್ಮನ್ನು ಸಮರ್ಥಿಸಿಕೊಳ್ಳುವ ಮೂಲಕ ದೇಶಭಕ್ತನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ
“ನಾನು ದೇಶದ್ರೋಹಿಯಾದೇ”….

■ವಿದೇಶದಲ್ಲಿರುವ ಬ್ಲಾಕ್ ಮನಿಯನ್ನು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿರಿ…
ಯಾವಾಗಲೂ ವಿದೇಶಗಳನ್ನು ಸುತ್ತುತ್ತಿರುತ್ತೀರಿ ಆದರೆ ಇದರ ಕಡೆ ನೀವು ಗಮನ ಹರಿಸಲಿಲ್ಲ…

ಆಗಲೂ ನಿಮ್ಮನ್ನು ಟೀಕಿಸುತ್ತಿದ್ದವರಿಗೆ ಬುದ್ದಿ ಹೇಳುವ ಕೆಲಸ ಮಾಡಿ….
“ಮಾತಿಗೆ ತಪ್ಪಿದ ಮಗ ಎನಿಸಿಕೊಂಡೆ”…

■ಲೋಕಪಾಲ್ ಬಿಲ್ ಅನ್ನು ಮಂಡಿಸುತ್ತೀರಿ ಅಂದುಕೊಂಡೇ, ಆದರೆ ನೀವು ಅದರ ಕಡೆ ಗಮನವೇ ಹರಿಸಲಿಲ್ಲ, ಗುಜರಾತ್ ನಲ್ಲಿ ಲೋಕಾಯುಕ್ತ ಸಂಸ್ಥೆ ಸತ್ತು 12 ವರ್ಷಗಳಾಗಿರುವಾಗ, ನಾನು ಲೋಕಪಾಲ್ ಬಿಲ್ ಅನ್ನು ನಿಮ್ಮಿಂದ ಬಯಸಿದ್ದು ತಪ್ಪೆಂದು ಗೊತ್ತಾಯಿತು…

ಆದರೂ ನಿಮ್ಮ ಮೇಲಿನ ಗೌರವದಿಂದ ಸಮರ್ಥಿಸಿಕೊಂಡು ಭ್ರಷ್ಟರನ್ನು ಬೆಂಬಲಿಸುವ ಮೂಲಕ “ನಾನು ಭ್ರಷ್ಟಾಚಾರಿಯಾದೇ”…

■ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿದ್ದಾಗ, ತಾವು ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ಪರಿಹಾರ ಕೊಡಿಸುತ್ತೀರಾ ಅಂದುಕೊಂಡೆ…
ಆದರೆ ನೀವು ಮಾತ್ರ ಇದು ತಮಗೆ ಸಂಬಂದಿಸದ ಹಾಗೆ ವರ್ತಿಸಿದಿರಿ..

ಮತ್ತೆ ಕನ್ನಡಿಗನೆಂಬ ಸ್ವಾಭಿಮಾನವನ್ನು ಬಿಟ್ಟು
ನಿಮ್ಮನ್ನು ಸಮರ್ಥಿಸಿಕೊಂಡು
“ನಾಡದ್ರೋಹಿ ಯಾದೇ”….

■ನಮ್ಮ ಉತ್ತರ ಕರ್ನಾಟಕದ ಮಂದಿ ಕಳಸಾಬಂಡೂರಿ ಯೋಜನೆಗಾಗಿ ಸತತ 2 ವರ್ಷಗಳ ಕಾಲ ಹೋರಾಟ ಮಾಡಿದರು…
ಆದರೆ ತಾವು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದ ರೀತಿ ವರ್ತಿಸಿದಿರಿ…
ಟ್ವಿಟರ್ ನಲ್ಲಿ ಒಂದು ಹುಡುಗಿ ಶಾಲು ಕೇಳಿದ ತಕ್ಷಣ ಆಕೆಗೆ ಸ್ಪಂದಿಸಿದಿರಿ, ಆದರೆ ನಮ್ಮ ಜನರಿಗೆ ಕುಡಿವ ನೀರಿಗೆ ಸ್ಪಂದಿಸಲು ನಿಮಗೆ ಸಮಯವಿರಲಿಲ್ಲ…

ಮತ್ತೆ ಮತ್ತೆ ಸಮರ್ಥನೆಗೆ ಇಳಿದು
ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದ್ದ ನಾನು
“ರೈತ ವಿರೋದಿಯಾದೇ”….

■ಉಧ್ಯಮಿಗಳ 80ಸಾವಿರ ಕೋಟಿ ಸಾಲಮನ್ನಾ ಮಾಡಿದಿರಿ, ಆದರೆ ನಮ್ಮ ರೈತರು ಸಾಲಮನ್ನಾಗೆ ಆಗ್ರಹಿಸಿ ಮೂತ್ರ ಕುಡಿದು ಪ್ರತಿಭಟನೆ ಮಾಡಿದರೂ ನೀವು ಅವರನ್ನು ಬೇಟಿಮಾಡುವ ಸೌಜನ್ಯ ತೋರಲಿಲ್ಲ…

ಅವತ್ತೂ ಕೂಡ ನಿಮ್ಮನ್ನು ಸಮರ್ಥಿಸಿಕೊಂಡು ರೈತರಿಗೆ ಮತ್ತೊಮ್ಮೆ ದ್ರೋಹ ಬಗೆಯುವುದರ ಮೂಲಕ
“ರೈತ ದ್ರೋಹಿಯಾದೇ”…

■ಭ್ರಷ್ಟಚಾರಿಗಳನ್ನು ಮಟ್ಟ ಹಾಕುತ್ತೇನೆಂದು ಹೇಳಿದಾಗ ಹಿಗ್ಗಿ ಮೆರೆದಿದ್ದೆ, ಜೈಲಲ್ಲಿ ಮುದ್ದೆ ಮುರಿದು ಬಂದ ಡಜನ್ ಗಟ್ಟಲೇ ನಾಯಕರನ್ನು ಇನ್ನೂ ಪಕ್ಷದಲ್ಲೇ ಉಳಿಕೊಂಡದ್ದೂ ಅಲ್ಲದೇ, ಕರ್ನಾಟಕದ ಅತಿದೊಡ್ಡ ಭ್ರಷ್ಟ ವ್ಯಕ್ತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಿರಿ…

ಮತ್ತದೇ ಕೆಲಸ.. ಸಮರ್ಥನೆಗಿಳಿದು ಭ್ರಷ್ಟಚಾರಿಗಳ ವಿರುದ್ದ ಹೋರಾಟ ಮಾಡುತ್ತಿದ್ದ ನಾನು ಭ್ರಷ್ಟರನ್ನು ಬೆಂಬಲಿಸುವ ಮೂಲಕ
“ದೊಡ್ಡ ಭ್ರಷ್ಟನಾದೇ”…

■ನಮ್ಮ ರಾಜ್ಯ ಅತಿಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯವಾದರೂ ಕೂಡ, ನಮ್ಮ ದುಡ್ಡನ್ನು ನಮಗೆ ಹಿಂದಿರುಗಿಸದೇ ಉತ್ತರ ಭಾರತದ ರಾಜ್ಯಗಳಿಗೆ ಕೊಟ್ಟು ನಮಗೆ ಅತೀ ಕಡಿಮೆ ಅನುಧಾನ ನೀಡಿದಿರಿ…

ನಾನು ಮಾತ್ರ ಮತ್ತೆ ಸಮರ್ಥನೆ ಮಾಡಿಕೊಂಡು “ಮತ್ತೊಮ್ಮೆ ನಾಡದ್ರೋಹಿಯಾದೇ”…

■ನೋಟ್ ಬ್ಯಾನ್ ಆದಾಗ ಇದೊಂದು ಮಹತ್ವದ ನಿರ್ಧಾರ ಅಂದುಕೊಂಡಿದ್ದೆ, ತದನಂತರ ಗೊತ್ತಾಯಿತು ಇದರಿಂದ 12 ಸಾವಿರ ಕೋಟಿ ದೇಶಕ್ಕೆ ನಷ್ಟವಾಯಿತು, ಅದೂ ಅಲ್ಲದೇ GDP ಕೆಳಕ್ಕೆ ಇಳಿದು ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು…

ಸಮರ್ಥನೆ ಮಾಡುವುದು ಮಾತ್ರ ನಾನು ಬಿಡಲಿಲ್ಲ…
ಇದನ್ನೂ ಸಮರ್ಥನೆ ಮಾಡಿಕೊಂಡು
“ನಾನೋಬ್ಬ ಮುಟ್ಟಾಳನಾದೇ”…

■GST ಯನ್ನು ಜಾರಿಗೆ ತಂದು 28% ಟ್ಯಾಕ್ಸ್ ಹಾಕುವ ಮೂಲಕ ಸಾಮಾನ್ಯ ಜನರ ಸುಲಿಗೆ ಮಾಡುತ್ತಿರುವಿರಿ, ಸಾಕಷ್ಟು ವಸ್ತುಗಳಿಗೆ ಈ ಹಿಂದೆ ಟ್ಯಾಕ್ಸ್ ಇರಲಿಲ್ಲ, ಈಗ ಅದಕ್ಕೂ ಟ್ಯಾಕ್ಸ್ ಕಟ್ಟುವಂತಾಗಿದೆ…

ಇದನ್ನು ಸಮರ್ಥಸಿಕೊಳ್ಳುವುದರ ಮೂಲಕ ನಾನು
“ಬಡಕೂಲಿಕಾರ್ಮಿಕರ ವಿರೋಧಿಯಾದೇ”..‌.

■ಪೆಟ್ರೋಲ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿದ್ದರೂ, ನೀವು ಮಾತ್ರ 125% ಟ್ಯಾಕ್ಸ್ ಹಾಕುವ ಮೂಲಕ ವಾಹನ ಸವಾರರನ್ನು ಹಗಲು ದರೋಡೆ ಮಾಡಿದಿರಿ, 30 ರೂಗೆ ಸಿಗಬೇಕಾದ ಪೆಟ್ರೋಲ್ ಗೆ 70 ರೂಪಾಯಿ ಕೊಡಬೇಕಾಗಿದೆ…

ಅದೇ ಹಳೇ ರಾಗದಂತೆ ನಿಮ್ಮನ್ನು ಸಮರ್ಥಿಸಿಕೊಂಡು “ಬಡ ವಾಹನ ಚಾಲಕರ ವಿರೋಧಿಯಾದೇ”…

■ರೈಲ್ವೇ ,ಸ್ಮಾರ್ಟ್ ಸಿಟಿ , ಬುಲೆಟ್ ಟ್ರೈನ್ ನಂಥ ಯೋಜನೆಗಳಲ್ಲಿ ನಮ್ಮ ಕರ್ನಾಟಕಕ್ಕೆ ಅನ್ಯಾಯ ಮಾಡಿದಿರಿ…

ಮತ್ತೆ ಸಮರ್ಥನೆ ಮಾಡಿಕೊಂಡು ಕರ್ನಾಟಕದ “ಅಭಿವೃದ್ದಿ ವಿರೋಧಿ ವ್ಯಕ್ತಿಯಾದೇ”…

ಕೊನೆಗೆ ಒಂದು ದಿನ ನನಗೆ ತಿಳಿಯಿತು ನಿಮಗೂ ಈ ಹಿಂದೆ ಇದ್ದ ಕಾಂಗಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ…
ನನ್ನ ನಂಬಿಕೆಗಳೆಲ್ಲ ಸುಳ್ಳಾಯಿತು…
ನಾನು ಕಂಡ ಭವ್ಯ ಭಾರತದ ಕನಸು ಕನಸಾಗಿಯೇ ಉಳಿದಿದೆ…
3 ವರ್ಷದಲ್ಲಿ ಏನೂ ಬದಲಾವಣೆ ಕಾಣುತ್ತಿಲ್ಲವೆಂದ ಮೇಲೆ 30 ವರ್ಷ ನಿಮಗೆ ಕೊಟ್ಟರೆ ಏನು ತಾನೇ ಮಾಡುವಿರಿ…

ಐ ಆಮ್ ವೇರಿ ಸಾರಿ ಮೋದೀಜಿ…
ನನ್ನ ಬೆಂಬಲವಿನ್ನು ನಿಮಗೆ ಇಲ್ಲ…

ನಿಮ್ಮ ಮಾತು ಕೇಳಿ ಕರ್ನಾಟಕದ ಭ್ರಷ್ಟ ಬಿಜೆಪಿಯವರಿಗೆ ಮತ ನೀಡಲು ನನಗೆ ಮನಸ್ಸಾಗುತ್ತಿಲ್ಲ…
ಕರ್ನಾಟಕಕ್ಕೆ ನಿಮ್ಮ ಕೊಡುಗೆ ಶೂನ್ಯ ಎಂದು ಗೊತ್ತಾಗಿದೆ…
3 ವರ್ಷ ಹುರುಳಿದರೂ ದೇಶದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ…

ಇಂತಿ ಮನನೊಂದ ನಿಮ್ಮ ಅಭಿಮಾನಿ….
ನಮಗೆ ಬರೀ ಮಾತು ಬೇಡ… ಕೃತಿ ಬೇಕು.

Leave a Reply