ವಿಕೃತ ಮನಸ್ಸಿನ ಮೋದಿ ಫ್ಯಾನ್ಸ್ ಮಾಡಿದ ನೀಚ ಕೆಲಸ ಏನು ಗೊತ್ತಾ ?

ನಮೋ

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ರನ್ನು ವೇಶ್ಯೆಯರಿಗೆ ಹೋಲಿಸಿದ ಪೋಸ್ಟ್ ಕಾರ್ಡ್.ಕಾಂ ಎಂಬ ವೆಬ್ಸೈಟ್ – ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ.

ಯಾವುದಿದು ಪೋಸ್ಟ್ ಕಾರ್ಡ್.ಕಾಂ.

ಈ ವೆಬ್ಸೈಟ್ ನಲ್ಲಿ ಬರುವ ಅಂಕಣಗಳನ್ನು ನೋಡಿದರೆ ಇದೊಂದು ಬಿಜೆಪಿ ಬೆಂಬಲಿತ ಸೈಟ್ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ, ಅಷ್ಟೇ ಅಲ್ಲದೆ ಈ ವೆಬ್ಸೈಟ್ ನಲ್ಲಿ ಬರುವ ಪ್ರತಿಯೊಂದು ಅಂಕಣಗಳು ಪ್ರತಿ ಬಿಜೆಪಿ ಬೆಂಬಲಿತ ಫೇಸ್ಬುಕ್ ಪೇಜ್ ಗಳಲ್ಲಿ ಶೇರ್ ಆಗುತ್ತವೆ. ಕಳೆದ ವಾರ ಇದೇ ವೆಬ್ಸೈಟ್ ದೇವೇಗೌಡರ ವಿರುದ್ಧವಾಗಿ ಒಂದು ಅಂಕಣ ಪ್ರಕಟಿಸಿ, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಕರುನಾಡಿನ ವನಿತೆಯರ ಮೇಲೆ ಏಕಿಷ್ಟು ಆಕ್ರೋಶ ಇದರ ಹಿನ್ನೆಲೆ ಏನು ??

ಇನ್ನೂ ಬಿಡುಗಡೆಗೊಂಡಿರದ ಪದ್ಮಾವತಿ ಎಂಬ ಹಿಂದಿ ಚಿತ್ರವನ್ನು ಜನತೆಗೆ ರಜಪೂತರ ರಾಣಿ ಪದ್ಮಿನಿಯ ಬಗ್ಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಬಿಜೆಪಿಗರು ವಿರೋಧಿಸುತ್ತಿರುವುದು ಪ್ರತಿಯೊಬ್ಬರೂ ತಿಳಿದಿರುವ ಸಂಗತಿ, ಕೆಲವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪದ್ಮಾವತಿ ಚಿತ್ರವನ್ನು ಈಗಾಗಲೇ ನಿಷೇಧಿಸಲಾಗಿದೆ, ಆದರೆ ನಿಷೇಧ ದ ವಿರುದ್ಧ ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ಛೀಮಾರಿ ಹಾಕಿ ಚಿತ್ರಗಳನ್ನು ಮನರಂಜನೆ ದೃಷ್ಟಿಯಿಂದ ಮಾತ್ರ ನೋಡಿ ಎಂದು ಆದೇಶ ಹೊರಡಿಸಿದೆ.
ಇಂತಹ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಪದ್ಮಾವತಿ ಚಿತ್ರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು ಚಲನಚಿತ್ರ ಬಿಡುಗಡೆಗೆ ಸಕಲ ರೀತಿಯಲ್ಲೂ ಅನುವು ಮಾಡಿಕೊಡುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಶ್ರೀ ಸಾ.ರಾ.ಗೋವಿಂದ್ ರವರು ಹೇಳಿದ್ದಾರೆ. ಇದು ಬಿಜೆಪಿ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ರನ್ನು ವೇಶ್ಯೆಯರಿಗೆ ಹೋಲಿಕೆ :

ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ಅಧ್ಯಕ್ಷ ರನ್ನು ನಿಂದಿಸುವ ಮತ್ತು ಟೀಕಿಸುವ ಭರದಲ್ಲಿ ಕನ್ನಡ ನಾಡಿನ ವೀರ ವನಿತೆಯರಾದ ಒನಕೆ ಓಬವ್ವ ಹಾಗೂ ಕಿತ್ತೂರು ಮಹಾಸಂಸ್ಥಾನದ ಮಹಾರಾಣಿಯಾದ ಚೆನ್ನಮ್ಮನನ್ನು ಉದಾಹರಣೆಯಾಗಿ ತೆಗೆದುಕೊಂಡು ವೇಶ್ಯೆಯರಿಗೆ ಹೋಲಿಕೆ ಮಾಡುವ ಮೂಲಕ ವಿಕೃತಿಯನ್ನು ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ :

ಸಾಮಾಜಿಕ ಜಾಲತಾಣಗಳಲ್ಲಿ ಈ ಅಂಕಣದ ಪ್ರಕಟಣೆಯನ್ನು ನೋಡಿದ ತಕ್ಷಣ ಕನ್ನಡಿಗರು ಈ ವೆಬ್ಸೈಟ್ ನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ವೆಬ್ಸೈಟ್ ಅನ್ನು ಈ ಕೂಡಲೇ ನಿಷ್ಕ್ರಿಯಗೊಳಿಸಬೇಕು ಮತ್ತು ಅಂಕಣಕಾರ ಹಾಗೂ ಪ್ರಕಟಿಸಿರುವವರನ್ನು ಈ ಕೂಡಲೇ ಪೋಲೀಸರು ಬಂದಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದು ಬಿಜೆಪಿ ಬೆಂಬಲಿತರ ಕನ್ನಡ ವಿರೋಧಿ ಧೋರಣೆಯೇ ??

ಈಗಾಗಲೇ ಬಿಜೆಪಿಯ ನಾಯಕರು ಮತ್ತು ಅನುಯಾಯಿಗಳು ಕನ್ನಡ ಧ್ವಜವನ್ನು ಸಾಂವಿಧಾನಿಕಗೊಳಿಸುವುದನ್ನು ವಿರೋಧಿಸಿ ಹಾಗೂ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಈಗಾಗಲೇ ಸ್ವಾಭಿಮಾನಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ವೆಬ್ಸೈಟ್ ಎಂದು ಹೇಳಲಾಗುವ ಪೋಸ್ಟ್ ಕಾರ್ಡಿ.ಕಾಂ ಕರ್ನಾಟಕದ ವೀರ ವನಿತೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಬಿಜೆಪಿ ಗೆ ರಾಜಕೀಯವಾಗಿ ಹಿನ್ನಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಬರಹ : ಅರುಣ್ ಕುಮಾರ್ ಮರಿಕೆಂಪಯ್ಯ

Leave a Reply