ಸಿದ್ದರಾಮಯ್ಯ ಭದ್ರತೆಗೆ ನಿಯೋಜನೆಗೊಂಡಿದ್ದ ಡಿವೈಎಸ್ಪಿ ಹೃದಯಘಾತದಿಂದ ಸಾವು

ಚಿಕ್ಕಮಗಳೂರು, ಡಿಸೆಂಬರ್ 01 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಚಿಕ್ಕಮಗಳೂರು ಗುಪ್ತಚರ ಇಲಾಖೆಯ ಡಿವೈಎಸ್ಪಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಎನ್.ಆರ್.ಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ವಾಸ್ತವ್ಯ ಹೂಡಿದ್ದು, ಅವರ ಭದ್ರತೆಗೆ ಡಿವೈಎಸ್ಪಿ ಶೇಖ್ ಹುಸೇನ್ ಅವರು ನಿಯೋಜನೆಗೊಂಡಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆಯೇ ಏಕಾಏಕಿ ಶೇಖ್ ಹುಸೇನ್ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದರು.

ಲೋ ಬಿಪಿ ಹಾಗೂ ಶುಗರ್ ನಿಂದ ಹೃದಯಾಘಾತವಾಗಿದ್ದು, ಎನ್.ಆರ್.ಪುರ ಸಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿತ್ತು. ಆದರೆ ಮಾರ್ಗ ಮಧ್ಯೆದಲ್ಲಿಯೇ ಶೇಖ್ ಹುಸೇನ್ ಕೊನೆಯುಸಿರೆಳೆದರು.

Leave a Reply