ಹೊಸದಿಲ್ಲಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇಂದು ದಿಲ್ಲಿಯಲ್ಲಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ತಮಗಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಮೋದಿಯವರೊಂದಿಗಿನ ಸ್ನೇಹದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಒಬಾಮಾ, ತುಸು ಯೋಚಿಸಿ, ‘ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ನನಗೆ ಉತ್ತಮ ಗೆಳೆಯ…’ ಎಂದರು.
2009ರಲ್ಲಿ ಸಂಭವಿಸಿದ ವಿತ್ತೀಯ ಸಂಕಷ್ಟವನ್ನು ಸರಿದೂಗಿಸಲು ಕೇಂಬ್ರಿಡ್ಜ್ ವಿವಿಯಲ್ಲಿ ಅಧ್ಯಯನ ಮಾಡಿದ ಮನಮೋಹನ್ ಸಿಂಗ್ ತೆಗೆದುಕೊಂಡ ದಿಟ್ಟ ಕ್ರಮಗಳು ಪ್ರಶಂಸನೀಯವೆಂದದರು. ‘ಸಿಂಗ್ ಬುದ್ಧೀವಂತ ಮತ್ತು ಅದ್ಬುತ ವ್ಯಕ್ತಿ,’ ಎಂದೂ ಕೆಲವು ವರ್ಷಗಳ ಹಿಂದೆ ಸಿಂಗ್ಗೆ ಒಬಾಮಾ ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಮೋದಿಗೆ ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇದೆ. ಆಡಳಿತವನ್ನು ಆಧುನೀಕರಣಗೊಳಿಸಲು ಅವರು ಶ್ರಮಿಸುತ್ತಿದ್ದಾರೆ,’ ಎಂದು ಬರಾಕ್ೇ ಹೇಳಿದ್ದಾರೆ.
ಒಬಾಮಾ ಪ್ರತಿಷ್ಠಾನ ಸಂಘಟಿಸಿದ ಟೌನ್ ಹಾಲ್ ಮೂಲಕ ಒಬಾಮಾ ಇಂದು ಭಾರತದ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ. ಇಂಥದ್ದೇ ಕಾರ್ಯಕ್ರಮಗಳು ಜರ್ಮನಿ, ಇಂಡೋನೇಷ್ಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಹಮ್ಮಿಕೊಳ್ಳಲಾಗಿತ್ತು.