ಯುಪಿ: 16ರಲ್ಲಿ 12 ಮೇಯರ್ ಸ್ಥಾನ ಗೆದ್ದ ಬಿಜೆಪಿ, ಬಿಎಸ್ಪಿಗೆ 2 ಸ್ಥಾನ, ಕಾಂಗ್ರೆಸ್ಗೆ ಮುಜುಗರ

ಲಕ್ನೋ, ಡಿಸೆಂಬರ್ 1: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 12ನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಇನ್ನೆರಡು ಸ್ಥಾನಗಳನ್ನು ಬಿಎಸ್ಪಿ ಗೆದ್ದಿದೆ.

ಯುಪಿ ಪಾಲಿಕೆ ಫಲಿತಾಂಶ: 198 ಪೈಕಿ 79ರಲ್ಲಿ ಬಿಜೆಪಿ ಮುನ್ನಡೆ ವಾರಣಾಸಿ, ಗೋರಖ್ ಪುರ, ಗಾಜಿಯಾಬಾದ್, ಬರೇಲಿ, ಆಗ್ರಾ, ಫಿರೋಜಾಬಾದ್, ಅಯೋಧ್ಯೆ, ಮಥುರಾ, ಲಕ್ನೋ, ಕಾನ್ಪುರ, ಶಹರಣ್ಪುರ ಮತ್ತು ಮೊರಾದಾಬಾದ್ ಮೇಯರ್ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದೇ ವೇಳೆ ಎರಡು ಮೇಯರ್ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಇನ್ನು ಅಲಿಘರ್ ಮತ್ತು ಮೀರತ್ ನಲ್ಲಿ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಮುಜುಗರ ಅನುಭವಿಸಿದ್ದು ಅಮೇಥಿ ನಗರ ಪಂಚಾಯತ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಮೇಥಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.

Leave a Reply