ಪ್ರತಾಪ್ ಸಿಂಹ ಯೋಗ್ಯತೆ ಬಿಚ್ಚಿಟ್ಟ ನೆಟ್ಟಿಗರು..

Jj

ಅದೃಷ್ಟವೆಂದರೆ ಇದೇ ಇರಬೇಕು.

ಅತಿ ಸಣ್ಣ ವಯಸ್ಸಿನಲ್ಲೇ ನಾನು ಬರಹಗಾರ ಮತ್ತು ಪತ್ರಕರ್ತನಾದೆ. ನನ್ನ ಅಂಕಣಗಳಿಗೆ ಲೇಖನಗಳಿಗೆ ಒಂದು ಅಭಿಮಾನಿ ವರ್ಗವೇ ಸೃಷ್ಟಿಯಾಯಿತು. ಟಿವಿ ನ್ಯೂಸ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ನಾನು ಚರ್ಚೆಗಳಲ್ಲಿ ಭಾಗವಹಿಸುತ್ತಾ ಬಹುಬೇಗ ಜನಪ್ರಿಯನಾದೆ.
ಜಗತ್ತಿನ ಬೆತ್ತಲೆಯನ್ನು ವರ್ಣಿಸಿ ಪುಸ್ತಕ ಬರೆದು ಬಲಪಂಥೀಯನೆಂಬ ಹಣೆಪಟ್ಟಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬಂದೆ. ಪತ್ರಕರ್ತರ ವಲಯದಲ್ಲಿ ಈಗಾಗಲೇ ಹೆಸರು ಮಾಡಿದ್ದ ಒಬ್ಬ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ದೊರೆಯಿತು.
ಸುಮಾರು 35 ವಯಸ್ಸಿನ ಆಸುಪಾಸಿನಲ್ಲೇ 2014 ರ ಮೋದಿ ಎಂಬ ಬೃಹತ್ ಅಲೆಯೆಂಬ ಬಂಪರ್ ಅದೃಷ್ಟವೊಂದು ಬಂದು ನನ್ನನ್ನು ಎತ್ತರಕ್ಕೆ ಕೊಂಡೊಯ್ದಿತು.
ಅಂದರೆ

ಒಂದು ಕ್ಷೇತ್ರದ ಸಂಸದನಾಗುವ ಸುಯೋಗ ಕೊಡಿಬಂದಿತು.

ಸಾಮಾನ್ಯ ಜನ ಕನಸಿನಲ್ಲೂ ಊಹಿಸಲಾಗದ ಬಹುದೊಡ್ಡ ಅಧಿಕಾರ ಮತ್ತು ಜವಾಬ್ದಾರಿ ನನ್ನನ್ನರಸಿತು. ನಾನು ಸಂಸಸದನಾದೆ. ಇದಕ್ಕಿಂತ ಅದೃಷ್ಟ ಇನ್ನೇನಿದೆ.

ಆಗ ನನ್ನ ಮುಂದೆ ಎರಡು ಆಯ್ಕೆಗಳಿದ್ದವು.

ಒಂದು…

ಈ ಒಲಿದ ಅದೃಷ್ಟವನ್ನು ನನ್ನ ಯೋಗ್ಯತೆಗೂ ಮೀರಿದ್ದು ಎಂದು ಆತ್ಮವಿಮರ್ಶೆ ಮಾಡಿಕೊಂಡು ವಿನಯದಿಂದ ಒಪ್ಪಿಕೊಂಡು ನನ್ನ ಅಧಿಕಾರ ಬಲದಿಂದ ಇಡೀ ಕ್ಷೇತ್ರವನ್ನು ರಾಷ್ಟದಲ್ಲೇ ಮಾದರಿಯಾಗಿ ಮಾಡುವುದು. ನನಗಿರುವ ಅಧಿಕಾರ ಬಳಸಿ ಅಧಿಕಾರಿಗಳು ಮಂತ್ರಿಗಳು ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಿ ಹೊಸ ಹೊಸ ಯೋಜನೆಗಳು – ಬಡತನ ನಿರ್ಮೂಲನೆಯ ಕಾರ್ಯಕ್ರಮಗಳು – ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಅವಶ್ಯವಿರುವವರಿಗೆ ತಲುಪಿಸಿ ಜನರ ಮನ ಗೆಲ್ಲುವುದು. ಮುಂದಿನ ಚುನಾವಣೆಯಲ್ಲಿ ಜನರೇ ನನ್ನನ್ನು ಅವರಾಗೇ ಮತ್ತೆ ಆಯ್ಕೆ ಮಾಡಿಕೊಳ್ಳವಂತೆ ಮಾಡುವುದು. ಬೇರೆ ಪಕ್ಷ ಇರುವ ರಾಜ್ಯ ಸರ್ಕಾರವೇನಾದರೂ ನನ್ನ ಒಳ್ಳೆಯ ಯೋಜನೆಗಳಿಗೆ ತೊಂದರೆ ಕೊಟ್ಟರೆ ಮುಲಾಜಿಲ್ಲದೆ ಜನರ ಮುಂದೆ ಅಂಕಿಅಂಶಗಳೊಂದಿಗೆ ವಿವರಿಸುವುದು. ಕನಿಷ್ಠ ನನ್ನ ಕ್ಷೇತ್ರದ ಜನರು ಇಡೀ ರಾಜ್ಯದಲ್ಲಿ ಒಂದಷ್ಟು ಉತ್ತಮ ಜೀವನಮಟ್ಟದ ಬದುಕು ಸಾಗಿಸುವಂತೆ ಮಾಡುವುದು.

ಎರಡನೆಯದು…

ಕೇವಲ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಅದೃಷ್ಟದಿಂದ ಬಂದ ಈ ಅಧಿಕಾರವನ್ನು ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ರಾಜ್ಯ ನಾಯಕನಾಗಿ ಬೆಳೆಯುವ ಆಯ್ಕೆ. ಅದಕ್ಕಾಗಿ ಕ್ಷೇತ್ರ ಸುತ್ತುವ ಕಷ್ಟದ ಕೆಲಸ ಬಿಟ್ಟು Facebook Twitter Watsapp ಮತ್ತು ಟಿವಿ ನ್ಯೂಸ್ ಮಾಧ್ಯಮಗಳ ಮುಖಾಂತರ ಜನರನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸಿ ರಾಮ ಆಂಜನೇಯ ಅಲ್ಲಾ ಯೇಸು ಪದ್ಮಾವತಿ ಟಿಪ್ಪುಸುಲ್ತಾನ್ ರಾಣಿ ಚನ್ನಮ ಒನಕೆ ಓಬವ್ವ ಪ್ರಕಾಶ್ ರೈ ಮುಂತಾದವರನ್ನು ಮೆಟ್ಟಿಲು ಮಾಡಿಕೊಂಡು ಭವಿಷ್ಯದ ರಾಜ್ಯ ಮಟ್ಟದ ನಾಯಕನೆಂದು ಬಿಂಬಿಸುವುದು. ಈಗ ಹೇಗಿದ್ದರು ಜನ ವಾಸ್ತವಕ್ಕಿಂತ ಭ್ರಮೆಗಳನ್ನೇ ಹೆಚ್ಚಾಗಿ ನಂಬುತ್ತಾರೆ. ನಾನು ಅದನ್ನೇ ಅವರಲ್ಲಿ ಉದ್ರೇಕಿಸಿದರೆ ಹೇಗೂ ಯುವಕನಾದ ನನಗೆ ಮುಂದೆ ಅತ್ಯುತ್ತಮ ಅವಕಾಶ ಕಾದಿದೆ.
ಇಲ್ಲಿಯವರೆಗೂ ತಂದು ನಿಲ್ಲಿಸಿರುವ ಅದೃಷ್ಟ ದೇವತೆ ಇನ್ನು ಮುಂದೆಯೂ ಕೊಂಡೊಯ್ಯುತ್ತಾಳೆ ಎಂಬ ನಂಬಿಕೆ ನನಗಿದೆ.
ಅದಕ್ಕಾಗಿಯೇ ಹೊಸ ಹೊಸ ಅವತಾರಗಳೊಂದಿಗೆ ನಿಮ್ಮ ಮುಂದೆ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದೇನೆ. ನಿಮಗೂ ಇದು ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ. ಅದಕ್ಕಾಗಿಯೇ ಎರಡನೆಯದನ್ನು ನಾನು ಆಯ್ಕೆ ಮಾಡಿಕೊಂಡೆ.
ದಯವಿಟ್ಟು ಹರಸಿ ಹಾರೈಸಿ.
ಒಂದುವೇಳೆ ನೀವು ಹಾರೈಸದಿದ್ದರೂ ಕತ್ತೆ ಬಾಲ.
ಅದೃಷ್ಟ ದೇವತೆ ನನ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸುವುದು ಗ್ಯಾರಂಟಿ. ಆಗ ನನ್ನ ಕಡೆಯಿಂದ ನಿಮಗೆ ಲೊಟ್ಟೆ .
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ಯುವಕರ ಸ್ಫೂರ್ತಿ ಚಿಲುಮೆ ರವಿ ಚೆನ್ನಣ್ಣನವರ್ ಅವರನ್ನು ಬಾಯಿಗೆ ಬಂದಂತೆ ಆಡಿಕೊಂಡ ಕಾರಣ

, ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಪ್ರತಾಪ್ ಸಿಂಹನ ನಿಜಬಣ್ಣವನ್ನು ವ್ಯಂಗ್ಯವಾಗಿ ಕಳಚುತ್ತಿದ್ದಾರೆ.

Leave a Reply