ದ್ವಿಚಕ್ರ ಸವಾರರಿಗೆ ಪ್ರತ್ಯೇಕ ಗೂಗಲ್‌ ಮ್ಯಾಪ್‌

ಹೊಸದಿಲ್ಲಿ: ಗೂಗಲ್ ಮ್ಯಾಪ್ ದಿನೇ ದಿನೇ ಅಪ್‌ಡೇಟ್ ಆಗುತ್ತಿದ್ದು, ಇದೀಗ ಬೈಕ್‌ ಸವಾರರಿಗೆ ತಮ್ಮ ಸವಾರಿ ಸುಲಭ ಮಾಡಲು ಟೂ ವೀಲ್ಹರ್‌ ಮೋಡ್‌ ಪರಿಚಯಿಸಿದೆ. ಇತೀಚೆಗಷ್ಟೇ ಕನ್ನಡ ಭಾಷೆಯಲ್ಲಿ ಜಾಗಗಳ ಹೆಸರು ನಮೂದಿಸುತ್ತಿದ್ದ ಗೂಗಲ್‌, ತನ್ನತ್ತ ಎಲ್ಲ ಜನರನ್ನು ಆಕರ್ಷಣೆಯತ್ತ ದಾಪುಗಾಲಿಟ್ಟಿದೆ.

ಗೂಗಲ್ ಮ್ಯಾಪ್‌ನಲ್ಲಿ ದ್ವಿಚಕ್ರ ಮೋಡ್‌ನಲ್ಲಿ ವೇಗದ ಡೈರೆಕ್ಷನ್, ಮಾರ್ಗಗಳನ್ನು ದ್ವಿಚಕ್ರ ಸವಾರರು ಪಡೆಯಬಹುದು, ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಹಿನ್ನಲೆಯಲ್ಲಿ ಅಡ್ಡದಾರಿಗಳು ಮತ್ತು ಒಳದಾರಿಗಳು ಕೆಲವೇ ಕೆಲವು ಬೈಕ್ ಸವಾರರಿಗೆ ತಿಳಿದಿವೆ, ಈ ನೂತನ ಟೆಕ್ನಾಲಜಿ ಇಂದ ತಮ್ಮ ಗುರಿಯನ್ನು ಅತಿ ಶೀಘ್ರದಲ್ಲಿ ತಲುಪಲು ಸಹಾಯಕವಾಗಲಿದೆ.

ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಕಾರ್, ಫೂಟ್ ಹಾಗೂ ಟ್ರೈನ್ ಜತೆಯಲ್ಲಿ ಈಗ ದ್ವಿಚಕ್ರವಾಹನ ಸವಾರರಿಗೆ ದಾರಿ ತೋರಲು ಗೂಗಲ್ ಮುಂದಾಗಿದೆ.

Leave a Reply