ಯಶ್ ಹಾಗು ರಾಧಿಕಾ ವಿವಾಹ ವಾರ್ಷಿಕೋತ್ಸವಕ್ಕೆ Mercedes Benz …

ಸಾಮಾನ್ಯವಾಗಿ ಮದುವೆ ವಾರ್ಷಿಕೋತ್ಸವಗಳಲ್ಲಿ ಗಂಡ-ಹೆಂಡತಿ ಇಬ್ಬರು ಸೇರಿ ಆಚರಣೆ ಮಾಡೋದು ಕಾಮನ್, ಆದರೆ ಯಶ್ ತಾವು ಎಲ್ಲರಿಗಿಂತಲೂ ಭಿನ್ನ ಅನ್ನೋದನ್ನ ನಿರೂಪಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಡಿಸೆಂಬರ್ 9 ನೇ ತಾರೀಖಿಗೆ ಒಂದು ವರ್ಷ ತುಂಬಲಿದೆ. ಇದೇ ಸಂಭ್ರಮದಲ್ಲಿ ಯಶ್ ತಮ್ಮ ಮನೆಯವರಿಗೆ ಉಡುಗೊರೆ ನೀಡಿದ್ದಾರೆ.

ಯಶ್ ಮದುವೆಯ ಮೊದಲ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಮೂರು ಕಾರುಗಳನ್ನ ಖರೀದಿ ಮಾಡಿದ್ದಾರೆ. ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು ಅನ್ನೋ ರೀತಿಯಲ್ಲಿ ಒಂದು ತನಗಾಗಿ ಮತ್ತೊಂದು ಪತ್ನಿ ರಾಧಿಕಾಪಂಡಿತ್ ಗಾಗಿ ಇನ್ನೊಂದು ಕಾರನ್ನ ತಮ್ಮ ತಂದೆ-ತಾಯಿಗಾಗಿ ಕೊಂಡುಕೊಂಡಿದ್ದಾರೆ.

ರಾಕಿಂಗ್ ಸ್ಟಾಟ್ ಯಶ್ ಕುಟುಂಬಕ್ಕೆ 3 ಹೊಸ ಕಾರ್ ಖರೀದಿ

ಯಶ್ ”Mercedes Benz” ನ ಮೂರು ಬೇರೆ ಬೇರೆ ಮಾಡೆಲ್ ನ ಕಾರುಗಳನ್ನ ಖರೀದಿ ಮಾಡಿದ್ದಾರೆ. ಅಪ್ಪ-ಅಮ್ಮನಿಗೆ ಬೆಂಜ್ (”Mercedes Benz” ) E-Class , ಪತ್ನಿ ರಾಧಿಕಾ ಪಂಡಿತ್ ಗೆ ಬೆಂಜ್ (”Mercedes Benz” ) GLS ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.

ನಟ ಯಶ್ ಅವರಿಗೆ ಕಾರ್ ಮತ್ತು ಬೈಕ್ ಗಳ ಕ್ರೇಜ್ ಇಲ್ಲ. ಸ್ಟಾರ್ ಆದ ನಂತರ ಬೈಕ್ ನಲ್ಲಿ ಓಡಾಡುವುದನ್ನ ನಿಲ್ಲಿಸಿದ್ದಾರೆ. ಮನೆಯಲ್ಲಿ ಎಲ್ಲರಿಗೂ ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಆರು ಕಾರುಗಳಿವೆ. ಆಡಿ Q7. ಆಡಿ A4, ರೇಂಜ್ ರೋವರ್ ಸೇರಿದಂತೆ ಪಜೆರೊ ಸ್ಪೋರ್ಟ್ಸ್ ಕಾರ್ ಗಳು ಯಶ್ ಮನೆಯಲ್ಲಿವೆ. ಅವುಗಳ ಜೊತೆಗೆ ಯಶ್ ತಮಗಾಗಿ ನಿನ್ನೆ ‘Benz GLC AMG COUPE’ ಕಾರನ್ನ ಕೊಂಡುಕೊಂಡಿದ್ದಾರೆ.

Leave a Reply