ಮಣಿಶಂಕರ್ ಅಯ್ಯರ್ ಅಮಾನತು

ನವದೆಹಲಿ, ಡಿಸೆಂಬರ್ 7: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ನೀಚ’ ಪದ ಬಳಕೆ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಿದ್ದಾರೆ. ನಾನು ಅವರು ನೀಚ ಜಾತಿಯವರು ಎಂದು ಹೇಳಿಲ್ಲ. ನನ್ನ ಮಾತನ್ನು ಬದಲಾಯಿಸಿ, ತಿರುಚಿದ್ದರೆ ನಾನು ಹೊಣೆಗಾರನಲ್ಲ. ಆದರೆ, ಆ ಪದ ಬಳಕೆಯಿಂದ ಯಾರಾಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ’ ಎಂದು ಕರೆದಿದ್ದಲ್ಲದೆ ‘ಸಭ್ಯತೆ’ ಇಲ್ಲದವನು ಎಂದು ಹೇಳಿದ್ದರು. ಈ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗಿತ್ತು.

ತಪ್ಪು ಪದ ಪ್ರಯೋಗಕ್ಕೆ ಕ್ಷಮೆ ಕೇಳಿರುವ ಮಣಿ ಶಂಕರ್ ಅಯ್ಯರ್ ಹಿಂದಿ ನನ್ನ ಮಾತೃ ಭಾಷೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಜಾತಿಯನ್ನು ಉಲ್ಲೇಖಿಸಿ ಈ ಪದ ಪ್ರಯೋಗಿಸಿರಲಿಲ್ಲ. ಹಿಂದಿಯಲ್ಲಿ ಈ ಪದಕ್ಕೆ ಬೇರೆ ಅರ್ಥವಿದೆ ಎಂದು ತಿಳಿದಿರಲಿಲ್ಲ ಎಂದು ಅಯ್ಯರ್ ವಿವರಿಸಿದ್ದಾರೆ.

ಆದರೆ, ಕಾಂಗ್ರೆಸ್ ಕಠಿಣ ನಿರ್ಧಾರ ಕೈಗೊಂಡಿದ್ದು, ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ಸದಸ್ಯತ್ವವನ್ನು ಅಯ್ಯರ್ ಕಳೆದುಕೊಂಡಿದ್ದಾರೆ. ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಜವಹರಲಾಲ್ ನೆಹರೂ ಅಗ್ರಗಣ್ಯರು. ದೇಶಕ್ಕಾಗಿ ದುಡಿದ ಇಂಥ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂಥ ವ್ಯಕ್ತಿ(ಮೋದಿ)ಯನ್ನು ನೀಚ ಎನ್ನದೇ ಇರಲಾಗದು, ಆತನಿಗೆ ಯಾವುದೇ ನಾಗರಿಕ ಸಭ್ಯತೆಗಳಿಲ್ಲ. ಸತ್ಯಂತ ಹೀನಾಯ ರೀತಿಯ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಎಎನ್ಐ ಜತೆ ಮಾತನಾಡುತ್ತಾ ಅಯ್ಯರ್ ಹೇಳಿದ್ದರು.

Leave a Reply