ನಾಗಿಣಿ ದೀಕ್ಷಿತ್ ಮೇಲೆ ಹಲ್ಲೆ

ಬೆಂಗಳೂರು, ಡಿಸೆಂಬರ್ 08 : ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ್ದಕ್ಕೆ ಕಿರುತರೆ ನಟನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಮಾರುತಿ ಮಂದಿರದ ಬಳಿ ನಡೆದಿದೆ.

ಗೆಳೆಯನ ಭೇಟಿಗೆಂದು ಬಂದು, ಪಾರ್ಕ್ ಮಾಡಿದ್ದ ತಮ್ಮ ಕಾರ್ ನ ಬಳಿ ತೆರಳುತ್ತಿದ್ದ ‘ನಾಗಿಣಿ’ ಧಾರವಾಹಿಯ ನಟ ದೀಕ್ಷಿತ್ ಅವರ ಜೊತೆ ಕೆಲವು ಫುಂಡರು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದಾರೆ, ಅವರು ಅನುಚಿತವಾಗಿ ಕುಡಿದಿದ್ದನ್ನು ಮನಗೊಂಡು ಸೆಲ್ಫಿ ತೆಗೆದುಕೊಳ್ಳಲು ದೀಕ್ಷಿತ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟೆಗೆದ್ದ ಅವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಅವರ ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ.

ಮೂವರೂ ಪುಂಡರು ಕುಡಿತದ ಅಮಲಿನಲ್ಲಿದ್ದರು ಎಂದು ದೀಕ್ಷಿತ್ ಹೇಳಿದ್ದಾರೆ, ದೀಕ್ಷಿತ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ನಟ ದೀಕ್ಷಿತ್ ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply