‘ಸಚಿನ್‌ ಸಾಗಾ’ ಕ್ರಿಕೆಟ್‌ ಗೇಮ್‌ ಅನಾವರಣ

ಬೆಂಗಳೂರು: ‘ಸಚಿನ್‌ ಸಾಗಾ ಕ್ರಿಕೆಟ್‌ ಚಾಂಪಿಯನ್ಸ್‌’ ಎಂಬ ವಿಡಿಯೊ ಗೇಮ್‌ ಅನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.

ತಮ್ಮ ಹೆಸರಿನ ಗೇಮ್‌ ಬಿಡುಗಡೆಗೊಳಿಸಿದ ಮಾತನಾಡಿದ ತೆಂಡೂಲ್ಕರ್‌, ”ಈ ಗೇಮ್‌ಗಾಗಿ 2 ವರ್ಷಗಳಿಂದ ಸಿದ್ಧತೆ ನಡೆಸಲಾಗಿತ್ತು. ಲಂಡನ್‌ನಲ್ಲಿನ ಸ್ಟುಡಿಯೊ ಒಂದರಲ್ಲಿ 36 ಕೆಮರಾಗಳ ಮುಂದೆ ನನ್ನ ದೇಹ ಚಲನೆಗಳ ಬಗ್ಗೆ ಶೂಟಿಂಗ್‌ ನಡೆಸಲಾಗಿತ್ತು. ಅಲ್ಲದೆ ನನ್ನ ವೃತ್ತಿಜೀವನಕ್ಕೆ ತಿರುವು ನೀಡಿದ 100 ಇನಿಂಗ್ಸ್‌ಗಳನ್ನು ಆಧರಿಸಿ ಈ ಗೇಮ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ,” ಎಂದು ತಿಳಿಸಿದರು

Image result for sachin with children

”ಮನೆಯಲ್ಲಿ ಮಗನ ಜತೆ ಫಾರ್ಮುಲಾ ಒನ್‌ ರೇಸ್‌ ಆಡುತ್ತೇನೆ. ಮಗಳೂ ಕೂಡ ಕೆಲವೊಮ್ಮೆ ನಮ್ಮನ್ನು ಸೇರಿಕೊಳ್ಳುತ್ತಾಳೆ. 1992ರಲ್ಲಿ ಯಾರ್ಕ್‌ಶೈರ್‌ ಪರ ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ ಆಡುತ್ತಿದ್ದಾಗ ಮೊದಲ ಬಾರಿ ವಿಡಿಯೊ ಗೇಮ್‌ ಸೆಂಟರ್‌ಗೆ ತೆರಳಿ ಕಾರ್‌ ರೇಸ್‌ ಆಡಿದ್ದೆ. 2002ರಲ್ಲಿ ನ್ಯೂಜಿಲೆಂಡ್‌ನಲ್ಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್‌ ವೇಳೆಯೂ ಕಾರ್‌ ರೇಸ್‌ ಗೇಮ್‌ಗಳನ್ನು ಆಡಿದ್ದೆ,” ಎಂದು ಸಚಿನ್‌ ಸ್ಮರಿಸಿಕೊಂಡರು.

Leave a Reply