ದೇಶ ದ್ರೋಹಿಗಳೊಂದಿಗೆ ಕೈಜೋಡಿಸಿದ ನಕಲಿ ದೇಶ ಭಕ್ತರ ಬಿಜೆಪಿ ಪಕ್ಷದ ಕರಾಳ ಮುಖ.. ಮುಂದೆ ಓದಿ

 

ಅಚ್ಚರಿಯಾಯಿತಾ?! ಬಿಜೆಪಿ ಎಂದು ನಾಮಕರಣ ಮಾಡಿಸಿಕೊಂಡ ಪಕ್ಷಕ್ಕೆ ಯಾವ ಸಿದ್ಧಾಂತಗಳಿದೆಯೋ,ಯಾವ ಧ್ಯೇಯವಿದೆಯೋ?! ಇವತ್ತಿನವರೆಗೂ ಅದೊಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ! ಕಮಲವನ್ನು ಚಿಹ್ನೆಯಾಗಿಸಿಕೊಂಡು, ‘ನಮ್ಮದು ದೇಶ ಭಕ್ತರ ಪಕ್ಷ’ ಎಂದು ಘೋಷಿಸಿಕೊಂಡ ನಂತರ ಇವರನ್ನು ನಂಬಿ ಮತ ನೀಡಿದ ದೇಶವಾಸಿಗಳಿಗೆ ತೋರಿಕೆಗಾಗಿ ಒಂದಷ್ಟು ಯೋಜನೆಗಳನ್ನು ಜಾರಿಗೊಳಿಸಿ, ಹಿಂದೆ ಹಿಂದೆಯೇ ದೇಶ ಭಕ್ತಿಯ ಹೆಸರಿನಲ್ಲಿ ಫೋಟೋಶಾಪ್ ರಾಜಕಾರಣ ಎಂಬ ಅದ್ಭುತ ಅಜೆಂಡಾವನ್ನು ಪರಿಚಯಿಸಿದ್ದು ಇದೇ ಬಿಜೆಪಿ!! ಕೊನೆ ಕೊನೆಗೆ,ಬಿಜೆಪಿ ಎಂಬುದು ಗಂಜಲ ಗಿರಾಕಿಗಳ ಪಕ್ಷ ಎಂಬಂತಾಗಿ, ಆಡಳಿತಾವಧಿಯಲ್ಲಿ ಇದೇ ಬಿಜೆಪಿಯ ಹೆಸರಿನಲ್ಲಿ ಕಾರ್ಯಕರ್ತರು ಕೀಳು ಮಟ್ಟದ ರೌಡಿಸಂಗೂ ಹೇಸದೇ ಇದ್ದದ್ದು ಕರ್ನಾಟಕಕ್ಕೆ ಗೊತ್ತಿರುವ ಸಂಗತಿಯೇ!


ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಈ ಹಿಂದಿವಾಲಾಗಳ ಪಕ್ಷವನ್ನು ತೀರಾ ಮುಗ್ಧರಾಗಿ ಕನ್ನಡಿಗರು ನಂಬಿದ್ದರು ಅದರಿಂದಾಗಿ ೨೦೧೪ ಚುನಾವಣೆಯಲ್ಲಿ ಉತ್ತಮ ಬೆಂಬಲ ಕೊಟ್ಟಿದ್ರು, ಆದ್ರೆ ಅವರು ಕನ್ನಡ ಧ್ವಜ ವಿಚಾರದಲ್ಲಿ, ಮಹದಾಯಿ-ಕಾವೇರಿ ಕುಡಿಯುವ ನೀರಿನ ವಿಚಾರದಲ್ಲಿ , ಹಿಂದಿ ಹೇರಿಕೆ ವಿಚಾರದಲ್ಲಿ ಕನ್ನಡಿಗರ ಪರ ನಿಲ್ಲದೆ ಹೈ ಕಮಾಂಡ್ ಬೂಟು ನೆಕ್ಕುವ ಹಿಂದಿ ಗುಲಾಮರು ಎಂಬುದನ್ನು ಸಾಬೀತು ಮಾಡಿದ್ರು. ಒಟ್ಟಿನಲ್ಲಿ, ಈ ಹಿಂದೆಯೇ ಬಿಜೆಪಿ ಎಂಬುದು ಎಂತಹ ‘ಕನ್ನಡ ವಿರೋಧಿ’ ಎಂಬುದು ಸಾಬೀತಾಗಿ ಹೋಗಿದೆ ಬಿಡಿ! ಅದರಲ್ಲಿಯೂ, ಬಿಜೆಪಿ ಸಚಿವರಾಗಿದ್ದ ಉಮೇಶ್ ಕಟ್ಟಿ ಅವರು ರಾಜ್ಯ ತುಂಡರಿಸುವ ಮಾಡು ಆಡಿದ್ದಾಗಲೂ , ತುಟಿಪಿಟಿಕ್ ಎಂದಿರಲಿಲ್ಲ ಇದೇ ಕಾರ್ಯಕರ್ತರು!

ಗೋವಿನ ರಕ್ಷಣೆ ಮಾಡೋ ಪಕ್ಷ ಅಂತಾ ಹೇಳಿಕೊಳ್ಳುವ ಇವರ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ ವಿದೇಶಕ್ಕೆ ಗೋ ಮಾಂಸ ರಫ್ತ್ತುನಿಷೇಧ ಮಾಡ್ತಾ ಇಲ್ಲ. ಗೋ ಪ್ರೇಮಿಗಳು ಎಷ್ಟೇ ಕೇಳಿಕೊಂಡರೂ ಅದಕ್ಕೆ ಕ್ಯಾರೇ ಅನ್ನದೇ ಗೋ ಮಾಂಸ ರಫ್ತ್ತು ಮಾಡುವ ಕಂಪೆನಿಗಳಿಂದಲೇ ಪಕ್ಷಕ್ಕೆ ದೇಣಿಗೆ ತೆಗೆದುಕೊಂಡು ಪಕ್ಷ ನಡೆಸುತ್ತಿರುವ ಈ ನಕಲಿ ಗೋ ರಕ್ಷಕ ಪಕ್ಷ ಬೇರೆ ಪಕ್ಷಗಳಿಗೆ ಉಪದೇಶ ಕೊಡುತ್ತದೆ ಮತ್ತು ನಕಲಿ ಗೋ ಪ್ರೇಮಿ ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಮಾತು ಆಡಲು ಬಾಯಿ ಬಿದ್ದು ಹೋಗಿದೆ.. 

ಮಾತೆತ್ತಿದರೆ ದೇಶ ಭಕ್ತಿ ಅನ್ನೋ ಈ ಪಕ್ಷಕ್ಕೆ ಇರುವ ದೇಶ ದ್ರೋಹಿಗಳ ಲಿಂಕ್ ಕೇಳಿದ್ರೆ ನಿಮಗೂ ಗಾಬರಿ ಆಗುವುದರಲ್ಲಿ ಸಂಶಯವೇ ಇಲ್ಲ. ಅವರ ಈ ಕೆಳಗಿನ ದೇಶ ದ್ರೋಹಿ ಘಟನೆಗಳ ಬಗ್ಗೆ ತಿಳಿಯುವುದು ನಿಮ್ಮೆಲ್ಲರ ಕರ್ತವ್ಯ ಹಾಗೂ ಇತರರಿಗೂ ಹಂಚಿ ಇವರ ನಕಲಿ ದೇಶ ಭಕ್ತರ ಮುಖ ಬಯಲಿಗೆ ಎಳೆಯುವುದು ನಮ್ಮ ಜವಾಬ್ದಾರಿ. 

೧. ಪಾಕಿ ಉಗ್ರಗಾಮಿಗಳು ನಮ್ಮ ದೇಶದ ವಿಮಾನ ಅಪಹರಣ ಮಾಡಿದ್ದಾಗ ಅಂದು ಪ್ರಧಾನಿ ಆಗಿದ್ದ ವಾಜಪೇಯಿಯವರಿಗೆ ನಮ್ಮ ದೇಶದ ಗುಪ್ತಚರ ಸಂಸ್ಥೆ ಅಪಹರಣ ಆಗಿದ್ದ ವಿಮಾನವನ್ನು ಮಿಲಿಟರಿ ಶಕ್ತಿ ಬಳಸಿ ಸುತ್ತುವರೆದು ನಮ್ಮ ದೇಶದಲ್ಲೇ ಇಳಿಸುವ ಯೋಜನೆ ಕೊಟ್ಟರೆ ಅದನ್ನು ತಿರಸ್ಕರಿಸಿ ಬಿಟ್ಟರು. ಕೊನೆಗೆ ಸೈನಿಕರು ಜೀವತೆತ್ತು ಹಿಡಿದಿದ್ದ ಪ್ರಮುಖ ಉಗ್ರಗಾಮಿಯನ್ನು ಸ್ವತಃ ರಕ್ಷಣಾ ಸಚಿವ ಶಾಲು ಹೊದಿಸಿ ಬಿಟ್ಟು ಬಂದಿದ್ದು ಅಂದಿನ ಬಿಜೆಪಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯವಾಗಿತ್ತು.

೨. ಜಮ್ಮು ಕಾಶ್ಮೀರದಲ್ಲಿ ನಮ್ಮ ಸೈನಿಕರ ಶ್ರಮದಿಂದ ಶಾಂತಿಯುತ ಮತದಾನ ನಡೆದಾಗ ಅಲ್ಲಿ ಬಹುಮತ ಬಂದ ಪಿಡಿಪಿ ಪಕ್ಷದ ನಾಯಕ ಮುಫ್ತಿ ಮೊಹಮದ್ ಸಯೀದ್ ಪಾಕಿಸಾನಕ್ಕೆ ಮತ್ತು ಪಾಕಿ ಉಗ್ರಗಾಮಿ ಸಂಘಟನೆಗಳಿಗೆ ಧನ್ಯವಾದ ಅರ್ಪಿಸಿ ನಮ್ಮ ಸೈನಿಕರರಿಗೆ ಅವಮಾನ ಮಾಡಿದ್ರು. 
ಇಂಥ ಪಾಕಿ ಏಜೆಂಟ್ ಜೊತೆಗೆ ಕೇವಲ ಅಧಿಕಾರಕ್ಕೆ ಬಿಜೆಪಿಯ ಅಮಿತ್ ಶಾ ಸರಕಾರ ರಚಿಸಿ ತಾವು ನಕಲಿ ದೇಶ ಭಕ್ತರು ಎಂದು ಸಾಬೀತು ಮಾಡಿದ್ರು. 
ಅಧಿಕಾರ ಸಿಗುತ್ತೆ ಅಂದ್ರೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಜೊತೆಗೂ ಹೋಗಲು ಹೇಸದ ಇವರ ನಡೆಗೆ ದೇಶ ಪ್ರೇಮಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. 

೩. ನಾಗಪುರದಲ್ಲಿ ಕೇವಲ ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಮತಾಂಧ ಮುಸ್ಲಿಂ ಲೀಗ್ ಜೊತೆಗೆ ಹೋಗಿದ್ದು ಈ ನಕಲಿ ಬಿಜೆಪಿಯವರ ಸಾಧನೆ. ಹೌದು, ಅಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಾಗ ಅಲ್ಲಿ ಬಹುಮತಕ್ಕೆ ಕೆಲವು ಮತಗಳ ಕೊರತೆಯಾಯಿತೆಂದು ಮತಾಂಧ ಮುಸ್ಲಿಂ ಲೀಗ್ ಜೊತೆಗೂಡಿ ಮೇಯರ್ ಉಪಮೇಯರ್ ಹುದ್ದೆ ಹಂಚಿಕೊಂಡಿದ್ದರು. ನಾಗಪುರದಲ್ಲಿ RSS ಕೇಂದ್ರ ಕಛೇರಿ ಇದ್ರೂ ಈ ಅಪವಿತ್ರ ಮೈತ್ರಿ ಹೇಗೆ ಆಯಿತು ಎಂದು ಹಲವರು ಪ್ರಶ್ನೆ ಮಾಡಿದ್ರು. 


೪. ಗೋವಾದಲ್ಲಿ ಬಿಜೆಪಿ ಸರಕಾರವಿದೆ ಅಲ್ಲಿ ಗೋ ಮಾಂಸಕ್ಕೆ ಕೊರತೆಯಾದಾಗ ಅಲ್ಲಿಯ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾದ ಜನತೆಗೆ ಗೋ ಮಾಂಸವನ್ನು ಬೇರೆ ರಾಜ್ಯದಿಂದ ಆಮದು ಮಾಡಿಕೊಂಡು ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ ಅಂದಿದ್ದರು. ಗೋ ರಕ್ಷಣೆ ಅಂತಾ ಬಾಯಿ ಬಾಯಿ ಬಡಿದುಕೊಳ್ಳುವ ಬಿಜೆಪಿ ಹಾಗು ಅದರ ನಕಲಿ ಗೋಪ್ರೇಮಿ ಚೇಲಾಗಳಿಗೆ ಆ ಮನೋಹರ್ ಪರಿಕ್ಕರ್ ವಿರುದ್ಧ ಮಾತಾಡಲು ಅವತ್ತು ಬಾಯಿಯೇ ಇರಲಿಲ್ಲ. 


೫. ಮಧ್ಯಪ್ರದೇಶದ ಬಿಜೆಪಿ ಕಾರ್ಯಕರ್ತರು ಪಾಕಿ ಉಗ್ರಗಾಮಿ ಸಂಘಟನೆಗಳು ಹಾಗೂ ಪಾಕಿ ಬೇಹುಗಾರಿಕಾ ಸಂಘಟನೆಗೆ ಕೆಲಸ ಮಾಡುತ್ತಿದ್ದ ಆತಂಕಕಾರಿ ಘಟನೆ ಬಯಲಿಗೆ ಬಂದು ಬಿಜೆಪಿಯಲ್ಲಿ ದೇಶಪ್ರೇಮಿಗಳು ಎಂಬ ಸೋಗು ಹಾಕಿಕೊಂಡು ದೇಶ ವಿರೋಧಿ ಚಟುವಟಿಕೆ ನಡೆಸುವವರು ಹಾಗೂ ರೋಲ್ಕಾಲ್ ದೇಶಭಕ್ತಿ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ ಎಂದು ಎಲ್ಲರೂ ಮಾತಾಡುವಂತಾಗಿದೆ.

Leave a Reply