2018ನೇ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರಿಗೆ ಆಗಮಿಸಲಿದ್ದಾರಾ ಸನ್ನಿ ಲಿಯೋನ್ ??

2018ನೇ ವರ್ಷದ ಸಂಭ್ರಮಾಚರಣೆಗೆ ಬಾಲಿವುಡ್ ನ ಖ್ಯಾತ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಲಿದ್ದು, ಸನ್ನಿ ನೈಟ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತ ಪಡಿಸಿದೆ.

‘ಸನ್ನಿ ನೈಟ್ಸ್’ ಕಾರ್ಯಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಇತ್ತೀಚೆಗಷ್ಟೇ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತ್ತು.

”ಸನ್ನಿ ನೈಟ್ಸ್ ನಮ್ಮ ಸಂಸ್ಕೃತಿ ಅಲ್ಲ, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಬೆತ್ತಲೆ ನಟಿ ಇಲ್ಲಿಗೆ ಬಂದು ಕುಣಿದು ನಮ್ಮ ಯುವ ಜನರನ್ನು ಹಾಳು ಮಾಡುವುದು ಬೇಡ. ಕಾರ್ಯಕ್ರಮ ರದ್ದು ಮಾಡುವಂತೆ ಕಾರ್ಯಕ್ರಮದ ಆಯೋಜಕರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡುವುದಾಗಿ ಕರವೇ ತಿಳಿಸಿದೆ.

ಒಂದು ವೇಳೆ ಸನ್ನಿ ಬರುವುದಾದರೇ, ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಡಿಸೆಂಬರ್ 31ರಂದು ಪಂಚತಾರಾ ಹೋಟೆಲ್‍ನಲ್ಲಿ ಸನ್ನಿ ನೈಟ್ಸ್ ಈ ಕಾರ್ಯಕ್ರಮ ನಡೆಯಲಿದೆ.

ಕೃಪೆ : ಮೂವಿ ಮಂತ್ರ

Leave a Reply