ರವಿ ಬೆಳಗೆರೆ ಪ್ರಕರಣ: ವಿಜಯ ಬಡಿಗೇರ್ ಬಂಧನ

ಬೆಂಗಳೂರು, ಡಿಸೆಂಬರ್. 11 : ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿಯನ್ನು ಬಂಧಿಸಲಾಗಿದೆ.

ಸಿಸಿಬಿ ಪೊಲೀಸರು ಮಹಾರಾಷ್ಟ್ರದ ಮೀರಜ್‌ನಲ್ಲಿ ಸೋಮವಾರ ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಶಶಿಧರ್ ಮಂಡೇವಾಡಿ ಈಗಾಗಲೇ ಸಿಸಿಬಿ ವಶದಲ್ಲಿದ್ದಾರೆ.

ಸೋಮವಾರ ಸಂಜೆ ಮಹಾರಾಷ್ಟ್ರದ ಸಂಬಂಧಿಕರ ಮನೆಯಲ್ಲಿ ವಿಜು ಬಡಿಗೇರ್‌ನನ್ನು ಬಂಧಿಸಲಾಗಿದೆ. ದೂರವಾಣಿ ಕರೆಯ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ.ಶಶಿಧರ್ ಮಂಡೇವಾಡಿ ಬಂಧನದ ಬಳಿಕ ವಿಜು ಬಡಿಗೇರ್‌ ನಾಪತ್ತೆಯಾಗಿದ್ದ.

Leave a Reply