ಚಕ್ರವರ್ತಿ ಸೂಲಿಬೆಲೆಗೆ ಕುಮಾರಣ್ಣನ ಅಭಿಮಾನಿಗಳಿಂದ ಹರಿದುಬಂತು ಮೆಚ್ಚುಗೆಯ ಮಹಾಪೂರ.

Jjj

ಹೌದು ,ಇಂದು ಫೇಸ್ಬುಕ್ ಲೈವ್ ಬಂದ ಚಕ್ರವರ್ತಿ ಮಿಥುನ್ aka ಚಕ್ರವರ್ತಿ ಸೂಲಿಬೆಲೆ ಮುಂದಿನ ಚುನಾವಣೆ ವಿಷಯವಾಗಿ ಮಾತಾಡುವಾಗ ಕರ್ನಾಟಕದ ವಿಕಾಸದ ವಿಷಯ ಪ್ರಸ್ತಾಪಿಸಿ ಯುವಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ವೈರಲ್ ಆದ ಆ ವಿಡಿಯೋದಲ್ಲೇನಿದೆ ?

ಸೂಲಿಬೆಲೆ ಲೈವ್ ಬಂದ ವಿಡಿಯೋದಲ್ಲಿನ ಪ್ರಮುಖ ಬಾಗವನ್ನು ನೆಟ್ಟಿಗರು ತುಂಡರಿಸಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಚಕ್ರವರ್ತಿ ಸೂಲಿಬೆಲೆ ಪರೋಕ್ಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದು , ಹಿಂದೂ – ಮುಸ್ಲಿಂರನ್ನು ಒಡೆದು ಮತಗಳನ್ನು ತಿರುಗಿಸಿಕೊಳ್ಳುವುದು ಬೇಡ ,ಪ್ರತ್ಯೇಕ ಲಿಂಗಾಯುತ ಧರ್ಮದ ವಿಚಾರ ಹಿಡಿದು ಮತ ಕೇಳುವುದು ಬೇಡ, ತಾಕತ್ತಿದ್ದರೆ ವಿಕಾಸದ ಹೆಸರಿನಲ್ಲಿ ,ನೀವು ಮಾಡಿರುವ ಅಭಿವೃದ್ಧಿ ಕೆಲಸಗಳು ,ರಾಜ್ಯದ ಅಭಿವೃದ್ಧಿಗೆ ನೀವೇ ಹಾಕಿಕೊಂಡಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಎದುರಿಸಿ ಅಂತ ನೇರ ಸವಾಲ್ ಹಾಕಿದ್ದಾರೆ.

ಜೆ.ಡಿ.ಎಸ್ ಬೆಂಬಲಿಗರು ಫುಲ್ ಖುಷ್ .

ಈ ವಿಡಿಯೋ ನೋಡಿದ ಕುಮಾರಸ್ವಾಮಿಯವರ ಬಹುತೇಕ ಬೆಂಬಲಿಗರು ಇವರ ವಿಕಾಸದ ಮಾತುಗಳಿಗೆ ಮನಸೋತು ಶಭಾಷಗಿರಿ ಕೊಡುತ್ತಿದ್ದಾರೆ. ಕುಮಾರಸ್ವಾಮಿಯವರು ಮತ್ತು ದೇವೇಗೌಡರ ಆಡಳಿತ ಅವಧಿಯಲ್ಲಿ ಯಾವುದೇ ಜಾತಿ ಧರ್ಮಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ, ಅವರು ಮಾಡಿರುವ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿರುವುದರಿಂದ ಸೂಲಿಬೆಲೆ ವಿಕಾಸ ಮುಂದಿಟ್ಟುಕೊಂಡು ಮಾತಾಡಿ ಅಂದಿದ್ದು ಜೆಡಿಎಸ್ ಬೆಂಬಲಿಗರ ಮೆಚ್ಚುಗೆಗೆ ಪ್ರಮುಖ ಕಾರಣವಾಗಿದೆ. ಜೆಡಿಎಸ್ ಬೆಂಬಲಿಗರು ತಮ್ಮೆಲ್ಲ ಫೇಸ್ಬುಕ್ ಪುಟಗಳಲ್ಲಿ, ಖಾತೆಗಳಲ್ಲಿ ,ಗುಂಪುಗಳಲ್ಲಿ ಹಾಕಿಕೊಂಡು ,

Whatappನಲ್ಲಿ ಸ್ಟೇಟಸ್ ಸಹ ಇಟ್ಟುಕೊಂಡು ಸಂಭ್ರಮಿಸುತ್ತಿದ್ದಾರೆ , ಈ ವಿಡಿಯೋವನ್ನು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.

ಅಭಿವೃದ್ಧಿ ಬಯಸುವವರು.

ಇದರಿಂದ ಮೇಲ್ನೋಟಕ್ಕೆ ತಿಳಿಯುವ ವಿಷಯವೇನೆಂದರೆ ,ಕುಮಾರಸ್ವಾಮಿಯವರಿಗೆ ಇರುವ ಬಹುತೇಕ ಅಭಿಮಾನಿಗಳು ಜಾತ್ಯತೀತರು ,ಪ್ರಗತಿಪರರು. ಅವರಿಗೆ ಯಾವ ಜಾತಿ ಧರ್ಮಗಳ ಗೊಡವೆಗಳು ಬೇಕಿಲ್ಲ, ಅವರಿಗೆ ಬೇಕಿರುವುದು ಅಭಿವೃದ್ಧಿ ,ಅಭಿವೃದ್ಧಿ ,ಅಭಿವೃದ್ಧಿ.

ಕೆಲವರ ಅನುಮಾನ

ಆದರೆ ಕೆಲವು ಕುಮಾರಣ್ಣನ ಅಭಿಮಾನಿಗಳು ಸುಲಿಬೆಲೆಯ ಈ ಮಾತುಗಳನ್ನು ಒಪ್ಪಿಕೊಳ್ಳಲು ತಯ್ಯಾರಿಲ್ಲ, ಅನುಮಾನಿಸತೊಡಗಿದ್ದಾರೆ.

ಅನುಮಾನದ ಕಾಮೆಂಟ್ಸ್

” ಚಿನ್ನದ ರೋಡು ” ಖ್ಯಾತಿಯ ಸೂಲಿಬೆಲೆ ತಮ್ಮ ಬಣ್ಣ ಬಣ್ಣದ ಮಾತುಗಳಿಂದ ,ಕನ್ನಡದ ಮುಗ್ದ ಯುವಕರನ್ನು ಸೆಳೆಯಲು ಏನೋ ಹೊಸ ಸ್ಕೆಚ್ ಹಾಕಿದಂತಿದೆ.

ಈ ಕೋಮುವಾದಿಗೆ ಬೇಕಿರುವುದು ಕರ್ನಾಟಕದ ವಿಕಾಸವಲ್ಲ, ಬಿಜೆಪಿಯ ವಿಕಾಸ.

ಹೌದು,ಸೂಲಿಬೆಲೆ ಅವ್ರೇ ನಿಮ್ಮ ಮಾತನ್ನು ಒಪ್ಪೋಣ ಆದ್ರೆ ನಿಮ್ಮ ಪಕ್ಷದ ತುಂಬಾ ಯೆಡಿಯೂರಪ್ಪ ಮತ್ತು ಜನಾರ್ದನ್ ರೆಡ್ಡಿಯಂತಹ ಜೈಲುಹಕ್ಕಿಗಳನ್ನು ಇನ್ನು ಇಟ್ಕೊಂಡು ಏನು ವಿಕಾಸ ಮಾಡ್ತೀರಾ..ನಿಮಗೆ ಯಾವ ಸಾಮರ್ಥ್ಯ ಇದೆ .

ಮೋದಿ ಬೆಳೆ ಬೆಯೋದಿಲ್ಲ ಕರ್ನಾಟಕದಲ್ಲಿ ಅಂತ ಈ ಗೂಲಾಮ ,ವಿಸ್ವಗುರು ಭಾರತ ಅನ್ನೋದನ್ನ ಬೀಟ್ಟು ನವ ಕರ್ನಾಟಕ ನೀರ್ಮಣ ಅಂತ ಯುವಕರನ್ನು ಬಕ್ರ ಮಾಡೋಕ್ಕೆ ಬಂದವನೆ…

ಎಂದೆಲ್ಲಾ ಕಾಮೆಂಟ್ಸ್ ಮಾಡುವುದರ ಮುಕಾಂತರ ತಮ್ಮ ಅನುಮಾನಗಳನ್ನು ಹೊರಹಾಕುತ್ತಿದ್ದಾರೆ.

ಜಯ ಹೇ ಕರ್ನಾಟಕ.

ಕೊನೆಯದಾಗಿ ಏನೇ ಆಗಲಿ ,ರಾಜಕೀಯ ಪಕ್ಷಗಳು ಜಾತಿ ಧರ್ಮವನ್ನು ಬಳಸಿಕೊಂಡು ನೀಚ ರಾಜಕಾರಣ ಮಾಡುವ ಬದಲು ,ವಿಕಾಸದ ಹೆಸರಲ್ಲಿ ನಾ ಮುಂದು ,ತಾ ಮುಂದು ಎಂದು ರಾಜ್ಯಕ್ಕಿರುವ ಸಮಸ್ಯೆಗಳನ್ನು ಬಗೆಹರಿಸಲಿ ,ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ದರೆ ಅಷ್ಟೇ ಸಾಕು.

Leave a Reply