೬೭(67)ರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ, ಡಿಸೆಂಬರ್ 12: ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು 67ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ವರ್ಷವು ಕಳೆದ ೩ ವರ್ಷದಂತೆ ಅದ್ದೂರಿ ಹುಟ್ಟುಹಬ್ಬ ಸಮಾರಂಭ, ಆಚರಣೆಗಳಿಂದ ರಜನಿ ದೂರು ಉಳಿದಿದ್ದಾರೆ.

ಆಪ್ತೇಷ್ಟರ ಜತೆ ರಜನಿ ಅವರು ಕಾಲ ಕಳೆಯಲಿದ್ದಾರೆ. ಚೆನ್ನೈ ಪ್ರವಾಹ, ಜೆ ಜಯಲಲಿತಾ ಸಾವು ಈ ಬಾರಿ ಓಖಿ ಚಂಡಮಾರುತದಿಂದಾಗಿ ರಜನಿ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಬೇಡ ಎಂದು ಸತತ ಮೂರು ವರ್ಷ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಸದ್ಯ ರಜನಿ ಅವರು ಶಂಕರ್ ನಿರ್ದೇಶನದ 2.0, ಪಾ ರಂಜಿತ್ ನಿರ್ದೇಶನದ ಕಾಲ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು. ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದಾರೆ.

 

Leave a Reply