ಸ್ಯಾಂಡಲ್ ವುಡ್ ನಲ್ಲಿ ‘ಟಗರು’ ಆರ್ಭಟ…

ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಸೂರಿ ನಿರ್ದೇಶನದ ಟಗರು ಚಿತ್ರ ಹಲವು ಸಿದ್ಧ ಸೂತ್ರಗಳಿಗೆ ತಿಲಾಂಜಲಿ ಇಟ್ಟಿದ್ದು ಚಿತ್ರಕ್ಕೆ ಸಂಗೀತವೇ ಮಾಂತ್ರಿಕ ಶಕ್ತಿಯಾಗಲಿದೆ ಎಂದು ಸೂರಿ ಹೇಳಿದ್ದಾರೆ.

ಶಿವರಾಜ್ ಕುಮಾರ್ ಮತ್ತು ಸೂರಿ ಕಾಂಬಿನೇಷನ್ ನ ಎರಡನೇ ಚಿತ್ರ ಟಗರು. ಈ ಜೋಡಿ ಇದಕ್ಕೂ ಮುಂಚೆ ಕಡ್ಡಿಪುಡಿ ಎಂಬ ಸೂಪರ್ ಹಿಟ್ ಚಿತ್ರವನ್ನು ನೀಡಿತ್ತು. ಟಗರು ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕ ಸೂರಿ ಅವರು ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಅವರೊಂದಿಗೆ ಚಿತ್ರಕ್ಕಾಗಿ ಸಾಕಷ್ಟು ವಿಭಿನ್ನ ಪ್ರಯತ್ನಗಳನ್ನು ಮಾಡಿದ್ದೇನೆ. ನನ್ನ ಇತರ ಚಿತ್ರಗಳಂತೆ ಈ ಚಿತ್ರದಲ್ಲಿ ಸಂಗೀತ ಇರುವುದಿಲ್ಲ. ಟಗರು ಚಿತ್ರದಲ್ಲಿ ಸಂಗೀತದ ಗಮಲು ಬದಲಾಗಿರುತ್ತದೆ ಎಂದರು.

Image result for tagaru

ಇನ್ನು ಚಿತ್ರಕ್ಕಾಗಿ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದರೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಇನ್ನು ಸಂಗೀತಕ್ಕಾಗಿ ಚಿತ್ರಕಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದೇನೆ ಎಂದರು.

ನನ್ನ ಈ ಹಿಂದಿನ ಚಿತ್ರಗಳಿಗೆ ಸಾಧು ಕೋಕಿಲಾ ಅಥವಾ ವಿ ಹರಿಕೃಷ್ಣರ ಜತೆ ಮಾಡಿದ್ದೇನೆ. ಟಗರು ಚಿತ್ರಕ್ಕಾಗಿ ಕೆಲ ಬದಲಾವಣೆಗಳನ್ನು ಮಾಡುವ ಮನಸ್ಸಾಯಿತು. ಅಂತೇ ಹೊಸ ಸಂಗೀತ ನಿರ್ದೇಶಕರ ಜತೆ ಕೂಡಿ ಕೆಲಸ ಮಾಡಲು ಸಿದ್ಧನಾದೆ ಅಂತೆ ನಾನು ಅಂದುಕೊಂಡದ್ದಕ್ಕಿಂತ ಅದ್ಭುತವಾಗಿ ಮೂಡಿಬಂದಿದೆ ಎಂದರು.

ಡಿಸೆಂಬರ್ 23ರಂದು ಬೃಹತ್ ವೇದಿಕೆ ಮೇಲೆ ಚಿತ್ರದ ಆಡಿಯೋ ಬಿಡುಗಡೆಗೆ ಮಾಡಲು ಸೂರಿ ಯೋಜನೆ ರೂಪಿಸಿದ್ದಾರೆ. ಚಿತ್ರವನ್ನು ಹೊಸಪೇಟೆ ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ.

ಚಿತ್ರ ಬಹುತಾರಾಗಣವನ್ನು ಹೊಂದಿದ್ದು ನಟ ಧನಂಜಯ್, ವಸಿಷ್ಠಾ ಸಿಂಹಾ, ಭಾವನ ಮತ್ತು ಮಾನ್ವಿತಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕೃಪೆ : ಮೂವಿ ಮಂತ್ರ

Leave a Reply