ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಸಂಯುಕ್ತ….

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಹಾಗೂ ನಟಿ ಲಾಸ್ಯಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ವಿಶೇಷವಾದ ಟಾಸ್ಕ್ ಮೇಲೆ ಸಂಯುಕ್ತಾ ಹೆಗಡೆ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಆದರೆ ಸಂಯುಕ್ತಾ ಮನೆಗೆ ಎಂಟ್ರಿ ಕೊಡುತ್ತಲೇ ಎಲ್ಲರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.

ಜಯ ಶ್ರೀನಿವಾಸ್ ಅವರ ನ್ಯೂಮರಾಲಾಜಿ ಬಗ್ಗೆ ಕೊಂಕಿನ ಮಾತನಾಡಿ ಅವರ ಕೋಪಕ್ಕೆ ಸಂಯುಕ್ತಾ ಕಾರಣರಾದರು, ನಂತರ ಜಗನ್ ಗೆ ನಿಮಗೆ ದುಬೈನಲ್ಲಿ ಗರ್ಲ್ ಫ್ರೆಂಡ್ ಇದ್ದಾರೆ ಅಲ್ವಾ? ನಿಮ್ಮ ಹಾಗೂ ಆಶಿತಾ ನಡುವೆ ಯಾವ ರೀತಿ ಸಂಬಂಧ ಇದೆ ಎಂದು ಕೇಳಿದರು. ನಂತರ ಜೆಕೆ ಅವರಿಗೆ ನಿಮ್ಮ ಹಾಗೂ ಶೃತಿ ಅವರ ಜೋಡಿ ತುಂಬಾ ಚೆನ್ನಾಗಿದೆ ಎಂದರು.

Leave a Reply