ಪ್ರಧಾನಿ ನರೇಂದ್ರ ಮೋದಿ ಕೂತರೂ ಸುದ್ದಿ, ನಿಂತರೂ ಸುದ್ದಿ. ತಮ್ಮ ಪ್ರತಿನಡೆಯನ್ನೂ ಸುದ್ದಿಯಾಗುವ ಹಾಗೆ ಮಾಡೋದು ಹೇಗೆ ಅನ್ನೋ ಚಾಣಾಕ್ಷ ಸಾಬರಮತಿ ನದಿಯಲ್ಲಿ ಸೀಪ್ಲೇನ್ ನಲ್ಲಿ ಪ್ರಯಾಣ ಮಾಡಿದ್ದೇ ಮಾಡಿದ್ದು, ಎಲ್ಲರ ಬಾಯಿಯಲ್ಲೂ ಬರಿ ಅದೇ ವಿಷಯ.
ಇದು ಎಷ್ಟು ಸತ್ಯ ?
ದೇಶದಲ್ಲಿ ಮೊದಲ ಸೀಪ್ಲೇನ್ ೨೦೧೦ರಲ್ಲಿ ‘ಜಲ್ ಹನ್ಸ್’ ಎಂಬ ಖಾಸಗಿ ಕಂಪನಿ ಅಂಡಮಾನ್ & ನಿಕೋಬಾರ್ನಲ್ಲಿ ಡಿಸೆಂಬರ್ ೨೦೧೦ ನಲ್ಲಿ ಕಾರ್ಯ ನಿರ್ವಹಣೆ ಶುರು ಮಾಡಿತ್ತು ಇದನ್ನು ಅಂದಿನ ಸಿವಿಲ್ ಏವಿಯೇಷನ್ ಮಂತ್ರಿಯಾಗಿದ್ದ ಪ್ರಫುಲ್ ಪಟೇಲ್ ತಮ್ಮ ಟ್ವಿಟರ್ ಮುಕಾಂತರ ತಿಳಿಸಿದ್ದಾರೆ.
2013 ರಲ್ಲಿ ಕೇರಳ ಸರ್ಕಾರ ಪ್ರವಾಸೋಧ್ಯಮ ಉತ್ತೇಜನಕ್ಕಾಗಿ ಸೀಪ್ಲೇನ್ ಸರ್ವಿಸ್ ಅನ್ನು ಕೇರಳ ಟೂರಿಸಂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಘೋಶಣೆ ಮಾಡಿತ್ತು ಆದರೆ ಇದು ಅಲ್ಲಿನ ಮೀನುಗಾರ ಪ್ರತಿಭಟನೆ ಇಂದ ಕಾರ್ಯ ರೂಪಕ್ಕೆ ಬರಲಿಲ್ಲ . ಇದನ್ನು ಕೇರಳದ ಅಂದಿನ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಇದಲ್ಲದೆ Seabird Seaplane Pvt Ltd ೨೦೧೨ ರಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ಕರಾಯ ನಿರ್ವಹಿಸುವುದಾಹಿ ಘೋಶಣೆ ಮಾಡಿತ್ತು. ಇನ್ನೊಂದು ಖಾಸಗಿ ಕಂಪನಿ ೨೦೧೧ ರಲ್ಲಿ ಅಂಡಮಾನ್ & ನಿಕೋಬಾರ್ ಐಲ್ಯಾಂಡ್ ನಲ್ಲಿ ಕಾರ್ಯನಿರ್ವಹಿಸಿ ನಂತರ ಮಹಾರಾಷ್ಟ್ರ ಮತ್ತು ಗೋವಾ ಗೆ ವಿಸ್ತರಿಸಿತ್ತು, ಕಾರಾಣಾಂತರಗಳಿಂದ ನಿಲ್ಲಿಸಿತ್ತು .
ನರೇಂದ್ರ ಮೋದಿಯವರು ಮೊನ್ನೆ ಪ್ರಯಾಣ ಮಾಡಿದ ಸೀ ಪ್ಲೇನ್ ಡಿಸೆಂಬರ್ ೯ರೆಂದು ಮುಂಬೈ ನಲ್ಲಿ ಪ್ರಯೋಗ ಸವಾರಿ ಮಾಡಿದ ಪ್ಲೇನ್ . ಅಂದು ನಿತಿನ್ ಗಡ್ಕರಿ ಮತ್ತು ಅಶೋಕ್ ಗಜಪತಿ ರಾಜು ಉಪಸ್ಥಿತರಿದ್ದರು.
ಕೆಲವು ಸತ್ಯಗಳನ್ನು ನಿಮ್ಮ ಮುಂದಿಟ್ಟಿದ್ದೇವೆ ಇನ್ನ ನೀವೇ ನೀವೇ ನಿರ್ಧರಿಸಿ..