ಪ್ರಿಯಾಂಕಾಗೆ ಮದರ್​ ತೆರೆಸಾ ಸ್ಮಾರಕ ಪ್ರಶಸ್ತಿ…

ಬಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕ ಛೋಪ್ರಾಗೆ ಸಾಮಾಜಿಕ ನ್ಯಾಯಕ್ಕಾಗಿ ನೀಡುವ ಈ ವರ್ಷದ ಮದರ್​ ತೆರೆಸಾ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿದೆ.

ಯುನಿಸೆಫ್​ ನ ಗುಡ್ ವಿಲ್ ಅಂಬಾಸಡರ್​ ಆಗಿಯೂ ನಟಿ ಸೇವೆ ಸಲ್ಲಿಸುತ್ತಿದ್ದು, ನಾನಾ ಜನ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇದೇ ವೇಳೆ ಪ್ರಿಯಾಂಕ ಪರವಾಗಿ ತಾಯಿ ಮಧು ಛೋಪ್ರಾ ಪ್ರಶಸ್ತಿ ಸ್ವೀಕರಿಸಿದರು. ಸಮಾಜ ಸೇವೆಗೆ ಆಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡ ಗೌರವಿಸಲಾಗಿದೆ ಇತ್ತೀಚೆಗಷ್ಟೆ ಸಿರಿಯಾಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತ ಮಕ್ಕಳ ಜತೆ ನಟಿ ಪ್ರಿಯಾಂಕ ಛೋಪ್ರಾ ಅವರು ಸಂವಾದ ನಡೆಸಿರುವುದನ್ನು ಸ್ಮರಿಸಿಕೊಳ್ಳಬಹುದು.

ಈ ಹಿಂದೆ ಖ್ಯಾತನಾಮರಾದ ಕಿರಣ್ ಬೇಡಿ, ಅಣ್ಣಾ ಹಜಾರೆ, ಆಸ್ಕರ್​ ಫರ್ನಾಂಡಿಸ್, ಸುಧಾ ಮೂರ್ತಿ, ಮಲಾಲ ಯೂಸಫ್ಜಾಯ್, ಸುಷ್ಮಿತಾ ಸೇನ್, ಬಿಲ್ಕಿಸ್ ಬನೋ ಎಧಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

Leave a Reply