ಬಿಜೆಪಿಯವರೇ ನೀವು ನೈಜ ಹಿಂದೂ ರಕ್ಷಕರು ಅನ್ನಿಸುವುದೇ ಇಲ್ಲ ನನಗೆ. (ಬಿಜೆಪಿ ಹಿಡನ್ ಅಜೆಂಡಾ ಬಗ್ಗೆ ಬಿಜೆಪಿ ಕಾರ್ಯಕರ್ತನ ಬೇಸರದ ಪತ್ರ)

  ಮೊಟ್ಟ ಮೊದಲನೆಯದಾಗಿಯೇ ಹೇಳಿಬಿಡುತ್ತೇನೆ! ನೀವು ನಿಜಕ್ಕೂ ಹಿಂದೂ ರಕ್ಷಕರ ಪಕ್ಷವೇ ಎನ್ನಿಸುವುದೇ ಇಲ್ಲ ನನಗೆ. ರಾಜಕೀಯಕ್ಕೆ ಸುಳ್ಳು ಸುದ್ದಿ ಹಬ್ಬಿಸಿ, ಗಲಭೆ ಎಬ್ಬಸಿ ಸತ್ತ ವ್ಯಕ್ತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಕೀಳು ವ್ಯಕ್ತಿತ್ವದವರು ಅನ್ನಿಸುತ್ತಿದೆ. 
ಮೊನ್ನೆ ಪರೇಶ್ ಮೇಸ್ತನೆಂಬ ಹುಡುಗನ ಹತ್ಯೆ ಅನುಮಾನಾಸ್ಪದ ರೀತಿಯಲ್ಲಿ ಆಗಿದೆ. ! ಖಾಸಗಿ ವೈದ್ಯರು ನೀಡಿದ ವರದಿಯಲ್ಲಿ ಆಕಸ್ಮಿಕ ಸಾವು ಎಂದು ಬಂದಿದೆ. 

ಈಗ ಸರಕಾರ ಈ ಸಾವಿನ ಕೇಸ್ ಅನ್ನು ಬಿಜೆಪಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರದ ಅಧೀನದಲ್ಲೇ ಇರುವ ಸಿಬಿಐ ಸಂಸ್ಥೆಗೆ ವಹಿಸಿದೆ. ಆದ್ರೂ ನೀವು ಇಂದು ಸಾಗರ ಬಂದ್ ಗೆ ಕರೆ ಕೊಟ್ಟಿದ್ದೀರಿ. ನೆನ್ನೆ ಮೊನ್ನೆ ಸುಳ್ಳು ಸುದ್ದಿ ಹಬ್ಬಿಸಿ ಹೊನ್ನಾವರ, ಕುಮುಟಾ, ಶಿರಸಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಬೆಂಕಿ ಹಾಕಿದ್ದೀರಿ..

ನಾನೊಬ್ಬ ಸಾಗರದ ದೇವಸ್ಥಾನದ ಅರ್ಚಕ, ನಿಮ್ಮದೇ ಪಕ್ಷದ ಕಾರ್ಯಕರ್ತ. ನೀವು ಬಂದ್ ಗೆ ಕರೆಕೊಟ್ಟಾಗಲಿಂದ ನನ್ನ ಮನೆ ಹಾಗೂ ನನ್ನೂರಿನ ಶಾಂತಿ ಸುವ್ಯವಸ್ಥೆ ಬಗ್ಗೆ ಯೋಚನೆ ಪ್ರಾರಂಭ ಆಗಿದೆ ನನಗೆ.  
ಸರಕಾರ ಈ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿದ ಮೇಲೂ ನೀವು ಅದಕ್ಕೆ ಸಂಬಂಧ ಇರದ ಊರಿನಲ್ಲಿ ಗಲಭೆ ಎಬ್ಬಿಸಲು ಹೊರಟಿರುವ ನಿಮ್ಮ ನಡೆಯ ಅರ್ಥವೇನು ಬಿಜೆಪಿ ನಾಯಕರೇ ? 

ಕೊಲೆ ಕೇಸ್ ಅಲ್ಲಿ ಜೈಲಿಗೆ ಹೋಗಿ ಬಂದ ಕ್ರಿಮಿನಲ್ ಆರೋಪಿ ಗುಜರಾತಿ ಅಮಿತ್ ಷಾ ಹೇಳಿದ ಎಂದು ನೀವು ಅವನ ಗುಲಾಮರಂತೆ ನಿಮ್ಮ ರಾಜ್ಯದಲ್ಲೇ ಅಶಾಂತಿ ವಾತಾವರಣ ಸೃಷ್ಟಿಸಿ ಅದನ್ನು ಚುನಾವಣೆಗೆ ಬಳಸಿಕೊಳ್ಳುವ ನೀಚ ರಾಜಕೀಯ ಇನ್ನಾದರೂ ಸಾಕು ಮಾಡಿ. 
ನಿಮಗೆ ಪತ್ರ ಬರೆಯಬೇಕೆಂದಾಗಲಿ, ಅಥವಾ ಯಾವುದೋ ವೆಬ್ ಸೈಟು ನಡೆಸುವವರಿಗಾಗಲಿ, ಕಳಿಸಿಕೊಡಬೇಕು, ತನ್ಮೂಲಕ ಪ್ರಸಿದ್ಧನಾಗಬೇಕು ಎಂಬ ಯಾವುದೇ ಹಪಾಹಪಿ ನನಗಿಲ್ಲ. ಬದಲಾಗಿ, ನಿಮ್ಮ ಕೆಲವೊಂದು ನಕಲಿ ಹಿಂದೂ ರಕ್ಷದ ನಡೆಗಳಿಂದ ನನಗೆ ಪ್ರಶ್ನೆ ಮಾಡಲೇ ಬೇಕಾಗುವಂತಹ ಪರಿಸ್ಥಿತಿಯನ್ನು ನೀವು ತಂದುಕೊಟ್ಟಿದ್ದೀರಿ!
ನ್ಯಾಯ ಕೇಳುವ ಹೆಸರಲ್ಲಿ ನಮ್ಮ ಹಿಂದೂ ಸಮುದಾಯದವರ ಮನೆ ಮೇಲೆ ದಾಳಿ ನಡೆಸುವ, ಬಂದ್ ಮಾಡಿ ನಮ್ಮ ಹಿಂದೂ ಸಮುದಾಯದವರ ಜನಜೀವನ ಅಸ್ತವ್ಯಸ್ತ ಮಾಡುವ ನಿಮ್ಮ ಈ ಕೀಳು ಪ್ರವೃತ್ತಿಗೆ ಇನ್ನಾದ್ರೂ ಕೊನೆ ಹಾಡಿ. ಅದರ ಬದಲು ಕೋಮುಘಲಭೆಯಲ್ಲಿ ಹತ್ಯೆಯಾದ ಅಮಾಯಕ ಬಡ ಹಿಂದೂ ಕುಟುಂಬಕ್ಕೆ ಕಾನೂನು ನೆರವು, ಆರ್ಥಿಕ ಸಹಾಯ ಮಾಡಿ. ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಸರಕಾರ ಇದೆ ಅವರಿಗೆ ಒತ್ತಡ ತಂದು ಪಿಎಫ್ ಐ ನಂತಹ ಸಂಘಟನೆಯನ್ನು ನಿಷೇಧಿಸಿಲು ನೀವು ಹೋರಾಟ ಮಾಡಿ.  
ರಾಷ್ಟ್ರ ವಿರೋಧಿ ಸಂಘಟನೆಗಳನ್ನು ನಿಷೇಧ ಮಾಡಿ ಅಂತಾ ಕಳೆದ ನಾಲ್ಕು ವರ್ಷದಲ್ಲಿ ಒಂದಾದ್ರೂ ಗಟ್ಟಿ ಹೋರಾಟ ಮಾಡಿದ್ದೀರಾ. ಓಹ್, ಟಿಪ್ಪು ವೇಷ ಮಾಡಿ ನಾನೇ ಟಿಪ್ಪು ಅಂದಿದ್ದ ಜೈಲುಹಕ್ಕಿ ಯಡಿಯೂರಪ್ಪನವನೇ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲವೇ ಹಾಗಾಗಿ ನೀವು ಬಿಜೆಪಿ ನಾಯಕರು ಹೋರಾಟ ಮಾಡದೇ ಬರಿ ಪ್ರಚೋದನಕಾರಿ ಹೇಳಿಕೆ ಕೊಟ್ಟು ಅಮಾಯಕ ಹಿಂದೂ ಹುಡುಗರನ್ನು ಬಾವಿಗೆ ತಳ್ಳಿ ಆಳ ನೋಡುವ ನಿಮ್ಮ ನಡೆ ನಿಜ ಹಿಂದೂಗಳಿಗೆ ಅವಮಾನ.
ಬಿಜೆಪಿ ನಾಯಕರೇ, ಭಾರತೀಯ ಸಂಸ್ಕೃತಿ, ಸ್ವದೇಶೀ ಸಂಸ್ಕೃತಿ ಅಂತಾ ಎಲ್ಲ ಬಾಯಲ್ಲಿ ಅಂದು ನೀವು ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಓದಲು ಬಿಟ್ಟು ಇಲ್ಲಿರುವ ಅಮಾಯಕ ಬಡ ಹಿಂದೂ ಮಕ್ಕಳನ್ನು ಕೋಮುಗಲಭೆ ಹೋರಾಟದಲ್ಲಿ ಬಳಸಿಕೊಳ್ಳುತ್ತೀರಾ. ನಾಚಿಕೆಯಾಗುವುದಿಲ್ಲವೇ ನಿಮಗೆ..? ನಿಮ್ಮ ಈ ನೀಚ ರಾಜಕೀಯಕ್ಕೆ ಶರತ್ ಮಡಿವಾಳ, ಪರೇಶ್ ಮೇಸ್ತನಂತಹ ಅಮಾಯಕ ಹಿಂದೂ ಬಡ ಮಕ್ಕಳ ಕೊಲೆಯಾಗುತ್ತಿದೆ. ಆದ್ರೆ ಅವರ ಸಮಾಧಿ ಮೇಲೆ ಅಧಿಕಾರ ನಡೆಸುವವರು ನೀವು, ಮಜಾ ಮಾಡುವವರು ನಿಮ್ಮ ಮಕ್ಕಳು. ವಾರೆ ವ್ಹಾ ಬಹಳ ಚೆನ್ನಾಗಿದೆ ನಿಮ್ಮ ಈ ರಾಜಕೀಯ. ನಿಮ್ಮ ಮಕ್ಕಳನ್ನೂ ಹಿಂದೂ ಪರ ಹೋರಾಟಕ್ಕೆ ಕರೆತನ್ನಿ ಅವಾಗ ನಿಮ್ಮ ನೈಜ ಹಿಂದೂ ಪರ ಕಾಳಜಿ ಸಾಬೀತಾಗುತ್ತದೆ. 
ಇದೆಲ್ಲಾ ಹೋಗಲಿ ನಿಮ್ಮ ನಕಲಿ ಹಿಂದೂ ರಕ್ಷಣೆಯ ಬಗ್ಗೆ ನನ್ನಲ್ಲಿ ಕೆಲವು ಪ್ರಶ್ನೆಗಳು ಇದ್ದವೇ ಅದಕ್ಕೆ ಉತ್ತರಿಸಿ.. 
೧. ಹಿಂದೂ ರಕ್ಷಕ ಪಕ್ಷ ಎಂದು ಹೇಳಿಕೊಳ್ಳುವ ನೀವು ಬರಿ ಜುಜುಬಿ ಮಹಾನಗರ ಪಾಲಿಕೆ ಅಧಿಕಾರಕ್ಕೆ ಯಾಕೆ ಮತಾಂಧ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿರಿ. ಅವರ ವಿರುದ್ಧ ಹೋರಾಟದಲ್ಲಿ ಬಲಿಯಾದ ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಬೆಲೆ ಇಲ್ಲವೇ ?

೨. ಮಂಗಳೂರಿನಲ್ಲಿ ಪ್ರವೀಣ್ ಪೂಜಾರಿ ಎಂಬ ಯುವಕ ತಾನು ಸಾಕಲು ದನವನ್ನು ಕೊಂಡು ಅದನ್ನು ಕ್ಯಾಂಟರ್ ಅಲ್ಲಿ ಸಾಗಿಸುವಾಗ ಮುಸ್ಲಿಂ ಎಂದು ಅಪಾರ್ಥ ಮಾಡಿಕೊಂಡು ಕತ್ತಲೆಯಲ್ಲಿ ನಿಮ್ಮ ಸಂಘಟನೆಯ ಯುವಕರು ಹೊಡೆದು ಸಾಯಿಸಿದ್ದಾಗ ಅಂದು ಯಾಕೆ ನೀವು ಆತನ ಕುಟುಂಬದ ಸಹಾಯಕ್ಕೆ ಹೋಗಲಿಲ್ಲ?

೩. ಆಳ್ವಾಸ್ ಕಾಲೇಜಿನಲ್ಲಿ ಕಾವ್ಯಾ ಪೂಜಾರಿ ಎಂಬ ಅಪ್ರಾಪ್ತ ಯುವತಿ ಅನುಮಾನಾಸ್ಪದವಾಗಿ ಸತ್ತಾಗ ಯಾಕೆ ನೀವು ಆ ಹುಡುಗಿಯ ಕುಟುಂಬದ ಪರ ನಿಲ್ಲಲಿಲ್ಲ. ಆಳ್ವಾಸ್ ಕಾಲೇಜು ಮುಖಸ್ಥ ನಿಮ್ಮ ಪಕ್ಷಕ್ಕೆ ದೇಣಿಗೆ ಕೊಡುವವನು ಎಂದು ಆ ಬಡ ಹಿಂದೂ ಯುವತಿಯ ಸಾವಿಗೆ ನ್ಯಾಯ ಕೊಡಿಸದ ನಿಮ್ಮ ನಕಲಿ ಹಿಂದೂ ಪರ ನಡೆ ನಿಮಗೆ ನಾಚಿಕೆ ತರಿಸುತ್ತಿಲ್ಲವೇ.?

೪. ಪರಮ ಉಗ್ರ ಜಿಹಾದಿ ಮತಾಂಧ ಹಿಂದೂ ವಿರೋಧಿ ಪಿಡಿಪಿ ಪಕ್ಷಕ್ ಅಧಿಕಾರಕ್ಕೆ ಮೈತ್ರಿ ಮಾಡಿಕೊಂಡಿರಲ್ಲ ಅದಕ್ಕಿಂತ ನಾಚಿಕೆಗೇಡು ನಿಮಗೆ ಇನ್ನೇನಿದೆ. ಪಿಡಿಪಿ ಪಕ್ಷದವರು ಅಮರನಾಥ ಯಾತ್ರಿಕರನ್ನು ಕೊಲ್ಲಿಸಿದ ವಿಚಾರ ಗೊತ್ತಿದ್ದರೂ ನೀವು ಆ ಹಿಂದೂ ವಿರೋಧಿ ಉಗ್ರಗಾಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಾಗ  ಅಮರನಾಥ ಯಾತ್ರೆಯಲ್ಲಿ ಅಸುನೀಗಿದ ನೈಜ ಹಿಂದೂಗಳ ಆತ್ಮ ನಿಮಗೆಷ್ಟು ಶಾಪ ಹಾಕಿದೆ ಅನ್ನುವ ಅರಿವಿದೆಯೇ..?
ಸದ್ಯಕ್ಕೆ ಇಷ್ಟು ಇರಲಿ.. ಬೇರೆ ರಾಜ್ಯದ ಕಥೆ ಬೇಡ.. ಮತ್ತೆ ಎಂದೂ ಹಿಂದೂ ಕಾರ್ಯಕರ್ತರ ಹತ್ಯೆ ಆಗದೇ ಇರಲು ನಾನು ದೇವರಿಗೆ ಬೇಡಿಕೊಳ್ಳುತ್ತೇನೆ. ನೈಜ ಹಿಂದೂ ರಕ್ಷಣೆ, ಹೋರಾಟ ಮಾಡುವುದಾದ್ರೆ ನಿಮ್ಮ ಮಕ್ಕಳನ್ನೂ ಹಿಂದೂ ಪರ ಹೋರಾಟಕ್ಕೆ ಕರೆತನ್ನಿ ಬರಿ ಅಮಾಯಕ ಬಡ ಹಿಂದೂ ಹುಡುಗರು ಸಾಯುವ ಹಾಗೆ ಮಾಡಿ ನೀವು ಮಾತ್ರ ಅಧಿಕಾರ ಅನುಭವಿಸುವ ದುರ್ಬುದ್ದಿ ಬಿಟ್ಟುಬಿಡಿ. ಆ ಗುಜರಾತಿ ಅಮಿತ್ ಷಾ ಹೇಳಿದ ಎಂದು ನೀವು ಅವನ ಗುಲಾಮರಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಇರುವ ಊರುಗಳಲ್ಲಿ ಬೆಂಕಿ ಇಡುವ ನೀಚ ಕೆಲಸ ಮಾಡಬೇಡಿ ದಯವಿಟ್ಟು. 
– ಸೀತಾರಾಮ ಶಾಸ್ತ್ರಿ 

ಸಾಗರ

Leave a Reply