ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾಸ್ತವ್ ಒಂದೇ ಚಿತ್ರದಲ್ಲಿ …

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ.

ಡಿಸೆಂಬರ್ 14 ರಂದು ರಾಜಾಜಿನಗರದ ಗಣಪತಿ ದೇವಸ್ಠಾನದಲ್ಲಿ ಚಿತ್ರದ ಮಹೂರ್ತ ನೆರವೇರಲಿದೆ. ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಲು ಆಗಮಿಸಲಿದ್ದಾರೆ. ನಂದಕಿಶೋರ್ ಪೊಗರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ.

ಅಂದಹಾಗೆ ‘ಪೊಗರು’ ಸಿನಿಮಾಗೆ ಕನ್ನಡದ ಇಬ್ಬರು ನಾಯಕಿಯರು ಆಯ್ಕೆ ಆಗಿದ್ದಾರೆ. ಹೌದು,ನಿರ್ದೇಶಕ ನಂದಕಿಶೋರ್ ಸಿನಿಮಾಗೆ ಇಬ್ಬರು ನಾಯಕಿಯರನ್ನ ಬುಕ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರು ‘ಪೊಗರು’ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ನಾಳೆ ಮುಹೂರ್ತ ಮುಗಿಸಿದ ನಂತರ ನಂದಕಿಶೋರ್ ಮತ್ತು ತಂಡ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಶುರು ಮಾಡಲಿದೆ.ಪೊಗರು ಸಿನಿಮಾದಲ್ಲಿ ಜಗಪತಿ ಬಾಬು, ಪ್ರಕಾಶ್ ರಾಜ್, ಸಾಧುಕೋಕಿಲ ಮತ್ತು ಚಿಕ್ಕಣ್ಣ ಅಭಿನಯಿಸಲಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply