‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ಗೆ ಕಿಚ್ಚ ಸುದೀಪ್ ನಿಂದ ಕಾರ್ ..

ಕಿಚ್ಚ ಸುದೀಪ್ ಬಡವರಿಗೆ ಹಾಗೂ ಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣ ಆಗುತ್ತಾರೆ ಅನ್ನೋದನ್ನ ಮತ್ತೆ ನಿರೂಪಿಸಿದ್ದಾರೆ. ಸದಾ ಒಂದಲ್ಲ ಒಂದು ಉಪಯುಕ್ತವಾಗುವಂತಹ ಕೆಲಸಗಳನ್ನ ಮಾಡಿ ವಾವ್ಹ್ ಕಿಚ್ಚ ಎನ್ನುವ ಭಾವನೆ ಮೂಡಿಸೋ ಸುದೀಪ್ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿದ್ದಾರೆ.

‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನ ಇಂದು (ಡಿ.13) ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ನ ಲೋಗೋವನ್ನ ಬಿಡುಗಡೆ ಮಾಡಿದ್ರು.

ಇದೇ ಸಮಯದಲ್ಲಿ ರೈತರ ಬಗ್ಗೆ ಮಾತನಾಡಿದ ಅಭಿನಯ ಚಕ್ರವರ್ತಿ ಸುದೀಪ್ ‘ಸಾಮಾನ್ಯವಾಗಿ ಕಲಾವಿದರಾದ ನಾವುಗಳು ಇಂತಹ ಕಾರ್ಯಕ್ರಮಕ್ಕೆ ಅಥಿತಿಗಳಂತೆ ಬಂದು ಹೋಗಿ ಬಿಡುತ್ತೇವೆ. ರೈತರ ಕಷ್ಟ ಮಾತ್ರ ಹಾಗೆಯೇ ಇರುತ್ತೆ. ನನಗೆ ರೈತರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ನನ್ನ ಬಳಿ ಕಾರ್ ಗಳಿವೆ ಅದರಲ್ಲಿ ನಾನು ಅತ್ಯಂತ ಪ್ರೀತಿ ಮಾಡೋ ‘ಬಿ ಎಂ ಡ್ಲ್ಯೂ’ ಕಾರನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ಗೆ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹಾಗೂ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಸುದೀಪ್ ‘ನಾನು ಭಾಷಣ ಮಾಡಲು ರಾಜಕೀಯ ವ್ಯಕ್ತಿ ಅಲ್ಲ ನಾನು ರಾಜಕೀಯಕ್ಕೆ ಬರುವುದಿಲ್ಲ’ ಎಂದಿದ್ದಾರೆ.

ಒಟ್ಟಾರೆ ಕನ್ನಡದ ಕಲಾವಿದರು ಸ್ವಯಂ ಪ್ರೇರಣೆಯಿಂದ ದೇಶದ ಬೆನ್ನೆಲುಬು ಅಂತಾರೆ ಕರೆಸಿಕೊಳ್ಳೊ ರೈತರಿಗೆ ಯಾವುದೋ ಒಂದು ರೀತಿಯಲ್ಲಿ ನೆರವಾಗುತ್ತಿರೋದು ಸಂತಸ ತರುವಂತ ವಿಚಾರ. ಇಂದು ಸುದೀಪ್ ಮಾಡಿರೋ ನಿರ್ಧಾರ ಮತ್ತಷ್ಟು ಜನರಿಗೆ ಸ್ಫೂತಿಯಾಗಲಿದೆ.

ಕೃಪೆ : ಫಿಲ್ಮಿಬೀಟ್

Leave a Reply