“ಹೆಚ್.ಡಿ.ಕೆ” ಭೇಟಿ ಮಾಡಿ ಶುಭಾಶಯ ಕೋರಿದ ” ಪ್ರಥಮ್ “

ಇಂದು ( 16/12/2017) ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯಯವರು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ,

ಕೋರ್ ಕಮಿಟಿ ಸಭೆ

ಇದರ ಅಂಗವಾಗಿ ಬೆಂಗಳೂರಿನ ಗಾಲ್ಫ್ ಕೋರ್ಸ್ ಬಳಿಯಿರುವ ” ಲೇ ಮೆರಿಡಿಯನ್ ” ತಾರಾ ಹೋಟೆಲ್ನಲ್ಲಿ ಜೆಡಿಎಸ್ ಪಕ್ಷದ ಶಾಸಕರುಗಳು ಮತ್ತು ಮುಖಂಡರುಗಳ ಕೋರ್ ಕಮಿಟಿ ಸಭೆ ಮತ್ತು ಹೆಚ್.ಡಿ. ಕೆ ಹುಟ್ಟುಹಬ್ಬ ಸಂಭ್ರಮಾಚರಣೆ ಇತ್ತು.

ಇಲ್ಲಿ ಕುಮಾರಸ್ವಾಮಿಯವರು ಇರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಕೇಕ್ ಮತ್ತು ಹೂವಿನ ಗುಚ್ಛಗಳನ್ನು ಹಿಡಿದು ನೆಚ್ಚಿನ ನಾಯಕನಿಗೆ ಶುಭಾಶಯ ಕೋರಲು ಜಮಾಯಿಸಿದ್ದರು.

“ಹೆಚ್.ಡಿ.ಕೆ” ಭೇಟಿ ಮಾಡಿ ಶುಭಾಶಯ ಕೋರಲು ಬಂದ ” ಪ್ರಥಮ್ “

ಶಾಸಕರುಗಳು ಸಭೆ ಮುಗಿದು ಬರುವ ಕುಮಾರಸ್ವಾಮಿಯವರ ದರ್ಶನ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾಗ ಗುಂಪಿನಲ್ಲಿ ಸರ ಸರನೆ ಬಂದ ಪ್ರಥಮ್, ತಮ್ಮ ಅಭಿಮಾನಿಗಳಿಗೆ ಪ್ರೀತಿಯಿಂದಲೇ ,ನಗು ನಗುತ್ತಲೇ ಮಾತನಾಡಿಸುತ್ತಾ ,ಸೆಲ್ಫಿ ಗಳಿಗೆ ಸಹಕರಿಸುತ್ತ ಒಳಕ್ಕೆ ಹೋಗಲು ಮುನ್ನಡೆದರು.

ಅಲ್ಲೇ ಇದ್ದ ಜೆಡಿಎಸ್ ಐ. ಟಿ ವಿಂಗ್ ಸದಸ್ಯರ ಸಹಾಯದಿಂದ ಸಭೆ ನಡೆಯುತ್ತಿದ್ದ ಜಾಗಕ್ಕೆ ಒಳ ಹೋದ ಪ್ರಥಮ್ ಪ್ರೀತಿಯಿಂದ ತಾವು ತಂದಿದ್ದ ಹೂವಿನ ಗುಚ್ಛ ನೀಡಿ ನೆಚ್ಚಿನ ನಾಯಕನಿಗೆ ಶುಭ ಹಾರೈಸಿದರು.

ದೇವೇಗೌಡರ ಮೊಮ್ಮಗ ,ಕುಮಾರಸ್ವಾಮಿಯವರು ದೊಡ್ಡಪ್ಪ , ಎಂದು ಹೇಳಿಕೊಂಡು ಬಿಗ್ಬಾಸ್ ಮನೆ ಪ್ರವೇಶಿಸಿ ಎಲ್ಲರ ತಲೆಗೆ ಹುಳಬಿಟ್ಟಿದ್ದ ಪ್ರಥಮ್ ,ರಾತ್ರಿ 12 ಗಂಟೆಗೆ ಕುಮಾರಣ್ಣ ಇರುವ ಜಾಗ ಹುಡುಕಿಕೊಂಡು ಬಂದು ಪ್ರೀತಿ ಯಿಂದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

(File pic)

https://suddisamachaara.com/vid-20171216-wa0019-mp4/

ಜನ್ಮದಿನದ ಹೆಚ್.ಡಿ.ಕೆ ದಿನಚರಿ

ಬೆಳಿಗ್ಗೆ 6 ಗಂಟೆಗೆ : ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ.

ಬೆಳಿಗ್ಗೆ 6.45 : ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಗೆ ಭೇಟಿ .

7.45AM – ಆದಿ ಚುಂಚನಗಿರಿ ಮಠ,ವಿಜಯನಗರ

8.45AM – ಪಕ್ಷದ ಕಚೇರಿ ಜೆ.ಪಿ ಭವನಕ್ಕೆ ಭೇಟಿ , ಆವರಣದಲ್ಲಿನ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ.

9.45AM- ಜೆ. ಪಿ ನಗರದಲ್ಲಿರುವ ಹೆಚ್ ಡಿ ಕೆ ಸ್ವಗೃಹಕ್ಕೆ ಮರಳಿ ,ಪ್ರೀತಿಯ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ.

12PM- ಗೊಟ್ಟಿಗೆರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ಕುಮಾರ್ ಅಭಿನಯದ ” ಕುರುಕ್ಷೇತ್ರ ” ಚಿತ್ರದ ಮೊದಲ ತುಣುಕು (ಟೀಸರ್ ) ಬಿಡುಗಡೆಯ ಅದ್ದೂರಿ ಕಾರ್ಯಕ್ರಮ .

ಮದ್ಯಾಹ್ನ 3 ಗಂಟೆಗೆ : ರಾಜಕೀಯ ಜನ್ಮಭೂಮಿ/ಕರ್ಮಭೂಮಿ “ರಾಮನಗರ”ದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ಹಾಗೂ ಇತರೆ ಉದ್ಘಾಟನೆಗಳು.

Leave a Reply