ಯೆಡಿಯೂರಪ್ಪಗೆ ಬರೆದ ಬಹಿರಂಗ ಪತ್ರದಿಂದ ,ಮೂರು ಕಾಸಿಗೆ ಹರಾಜಾಯ್ತು BSY ಮಾನ.

(ಚಿತ್ರದಲ್ಲಿ ಯೆಡಿಯೂರಪ್ಪನವರೊಂದಿಗೆ , ಪತ್ರ ಬರೆದ ಬಸವರಾಜ್ ಪಾಟೀಲ್ ಅವರನ್ನು ಕಾಣಬಹುದು )

ನಮಸ್ಕಾರ ಯಡಿಯೂರಪ್ಪನವರೇ…

ನಾನೊಬ್ಬ ನಿಮ್ಮ ಸಮುದಾಯದ ಯುವಕ,
ನಾನು ಹಾಗೂ ನನ್ನ ಕುಟುಂಬದ ಸದಸ್ಯರು ನಿಮ್ಮ ಪಕ್ಷಕ್ಕೆ ವೋಟ್ ಹಾಕುತ್ತಾ ಬಂದಿದ್ದೇವೆ…
ಕಾರಣ ನೀವೋಬ್ಬ ನಮ್ಮ ಸಮುದಾಯದ ನಾಯಕ ಅನ್ನುವ ಒಂದೇ ಕಾರಣಕ್ಕೆ…

ಆದರೆ, ಇನ್ನು ಮುಂದೆ ನಿಮ್ಮನ್ನು ಏಕೆ ಬೆಂಬಲಿಸಬೇಕು ಅನ್ನುವ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ…

●ಲಿಂಗಾಯತರ ನಾಯಕನೆಂಬ ಕಾರಣಕ್ಕೆ ಬೆಂಬಲಿಸೋಣವೆಂದರೆ…???

ನೀವು ಪ್ರತ್ಯೇಕ ಲಿಂಗಾಯತ ಧರ್ಮದ ಪರ ಹೋರಾಟ ಮಾಡುತ್ತಿಲ್ಲ…

●ಅಭಿವೃದ್ದಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮನ್ನು ಬೆಂಬಲಿಸೋಣವೆಂದರೆ…???

ನೀವು ಅಧಿಕಾರದಲ್ಲಿದ್ದಾಗ , ಅಭಿವೃದ್ದಿಗಿಂತ ಹಗರಣಗಳೇ ಜಾಸ್ತಿ ಇದ್ದವು, ಸ್ವತಃ ನೀವೂ ಸೇರಿ ಇಡೀ ಸಚಿವ ಸಂಪುಟವೇ ಜೈಲಿನಲ್ಲಿ ಮುದ್ದೆ ಮುರಿದಿರಿ….

●ರೈತರ ಹಿತದೃಷ್ಟಿಯಿಂದ ನಿಮ್ಮನ್ನು ಬೆಂಬಲಿಸೋಣವೆಂದರೆ…???

ನೀವು ಅಧಿಕಾರದಲ್ಲಿದ್ದಾಗ ಗೊಬ್ಬರ ಕೇಳಲು ಬಂದ ರೈತನಿಗೆ ಗುಂಡಿಟ್ಟು ಕೊಂದಿರಿ…

https://suddisamachaara.com/b-s-yeddyurappa-says-i-will-solve-mahadayi-issue-e0b2b8e0b381e0b2a6e0b38de0b2a6e0b2bf-e0b29fe0b2bfe0b2b5e0b2bf-mp4/

●ನಾಡು, ನುಡಿ ಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೆ…???

ನಿಮ್ಮದು ರಾಷ್ಟ್ರೀಯ ಪಕ್ಷ , ಮಾತೆತ್ತಿದರೆ ನಾವು ರಾಷ್ಟ್ರೀಯವಾದಿಗಳು ,ನಮಗೆ ದೇಶವೇ ಮೊದಲು, ನಾಡು-ನುಡಿ ಲೆಕ್ಕಕ್ಕಿಲ್ಲ ಅನ್ನುತ್ತೀರಿ…

●ಕಾವೇರಿ-ಮಹಾದಾಯಿಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೆ…???

ಕೇಂದ್ರದಲ್ಲಿ ನಿಮ್ಮ ಸರ್ಕಾರವೇ ಇದ್ದರೂ ಕೂಡ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ…

●ಉದ್ಯೋಗಕ್ಕಾಗಿ ನಿಮ್ಮನ್ನು ಬೆಂಬಲಿಸೋಣವೆಂದರೆ…???

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ. ಎಂದು ಹೇಳಿ ಅಧಿಕಾರ ಹಿಡಿದ ಮೋದಿಯವರಿಂದ ಒಂದೇ ಒಂದು ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ…

●ದೀನ-ದಲಿತರ ಉದ್ದಾರಕ್ಕಾಗಿ ನಿಮ್ಮನ್ನು ಬೆಂಬಲಿಸೋಣವೆಂದರೆ…???

ತಾವು ಮುಖ್ಯಮಂತ್ರಿಯಾಗಿದ್ದಾಗ ಅಂಬೇಡ್ಕರ್ ಪೋಟೋವನ್ನು ತೆಗಿಸಿ ಆಚೆಗೆ ಬಿಸಾಕಿದಿರಿ…

●ಕೊನೆಯದಾಗಿ ಹಿಂದೂಗಳಿಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೆ…???

ಅಮಾಯಕ ಹಿಂದೂ ಯುವಕರನ್ನು ಬಲಿಕೊಟ್ಟು …
ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತೀರಿ..
ನಮಗೆ ಬೇಕಾಗಿರುವುದು ನೀವು ಪಾಲಿಸುವ ಹಿಂದುತ್ವವಲ್ಲ…
ನಮ್ಮ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರು ಪಾಲಿಸುವಂತ ಹಿಂದುತ್ವ….
ನಿಜವಾದ ಹಿಂದೂ ಧರ್ಮದ ಉದ್ದಾರಕರು ನಮ್ಮ ಸ್ವಾಮೀಜಿಗಳು…

ದಯವಿಟ್ಟು ಕ್ಷಮಿಸಿ ಯಡಿಯೂರಪ್ಪನವರೇ …

ಇಷ್ಟು ದಿನ ನನಗೆ ಜಾತಿವ್ಯಾಮೋಹ ಭಾದಿಸುತ್ತಿತ್ತು…
ಆ ಕಾರಣಕ್ಕಾಗಿ ನಿಮಗೆ ಮತ ನೀಡುತ್ತಿದ್ದೆ…

ಆದರೆ ಈಗ ನನಗೆ ಜ್ಞಾನೋದಯವಾಗಿದೆ…

ನನ್ನ ನಾಡಿಗಾಗಿ ಹೋರಾಡುವವರಿಗೆ ನನ್ನ ಮತ…
ನನ್ನ ಭಾಷೆಯನ್ನು ರಕ್ಷಿಸುವವರಿಗೆ ನನ್ನ ಮತ…
ನಮಗೆ ಉದ್ಯೋಗ ನೀಡುವವರಿಗೆ ನನ್ನ ಮತ…
ನಮ್ಮ ಕಾವೇರಿ-ಮಹಾದಾಯಿಯನ್ನು ನಮಗೆ ಸಿಗುವಂತೆ ಮಾಡುವವರಿಗೆ ನನ್ನ ಮತ…
ನಮ್ಮ ರಾಜ್ಯದಲ್ಲಿ ಕೋಮುಗಲಭೆಯನ್ನು ತಡೆಗಟ್ಟಿ ಶಾಂತಿಯನ್ನು ನೆಲೆಸುವಂತೆ ಮಾಡುವವರಿಗೆ ನನ್ನ ಮತ…
ನಮ್ಮ ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೋಯ್ಯೂವವರಿಗೆ ನನ್ನ ಮತ…

—-ಬಸವರಾಜ್ ಪಾಟೀಲ್, ಹಾವೇರಿ

Leave a Reply