ಗುಜರಾತ್ ಚುನಾವಣೆ ಯಿಂದ ಕನ್ನಡಿಗರು ಕಲಿಯಬೇಕಾದದ್ದು ಏನು ??!!

Has

೧. ಬಿಜೆಪಿ ಯನ್ನು ವಿರೋಧಿಸುವವರಿಗೆ ಅಂದ್ರೆ ಬಿಜೆಪಿ ಯ ತತ್ವ ಸಿದ್ದಾಂತ ವನ್ನು ವಿರೋಧಿಸುವವರಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ ಅದು ಜನತಾದಳ.

೨.ದಲಿತರು ಮತ್ತು ಅಲ್ಪಸಂಖ್ಯಾತರ ಹೆಚ್ಚು ಶೇ ಮತಗಳು ಹೋಗೋದು ಕಾಂಗ್ರೆಸ್ ಗೆ ಆದರೆ ಈ ಬಾರಿ ಈ ಮತಗಳು ಕಾಂಗ್ರೆಸ್ ಗೆ ಹೋದ್ರೆ ಬಿಜೆಪಿ ಗೆ ಅನುಕೂಲ ಆಗುತ್ತೆ ( ಆಡಳಿತ ವಿರೋಧಿ ಅಲೆ ) ಆದ್ದರಿಂದ ಈ ವರ್ಗದ ಮತದಾರರು ಜನತಾದಳ ವನ್ನು ಬೆಂಬಲಿಸಬೇಕು.

೩. ಹೇಗೆ ರಾಷ್ಟ್ರದಲ್ಲಿ ಕಾಂಗ್ರೆಸ್ ಮುಕ್ತ ಅಭಿಯಾನ ಮುಂದುವರೆಯುತ್ತಿದೆಯೋ ಹಾಗೆಯೇ ಕರ್ನಾಟಕ ದಲ್ಲಿ ರಾಷ್ಟ್ರೀಯ ಪಕ್ಷಗಳ ಮುಕ್ತ ಕರ್ನಾಟಕ ಅನ್ನೋ ಸ್ಲೋಗನ್ ನನ್ನು ಸಾಕಾರಗೊಳಸಬೇಕು.

೪.ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಗೆಲುವು ಸಾಧಿಸಲಿಕ್ಕೆ ಕಾರಣ ನರೇಂದ್ರ ಮೋದಿ ಗುಜರಾತ್ ನವರು ಅನ್ನೋದಷ್ಟೇ, ಅಲ್ಲಿಯ ಜನ ಸ್ವಾಭಿಮಾನಿಗಳಾಗಿ ಗುಜರಾತಿಗಳಿಗೆ ಮಣೆ ಹಾಕಿರೋದರಿಂದ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಕನ್ನಡಿಗರಿಗೆ ಮೂಲತಃ ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಮತ ಹಾಕಬೇಕು.

೫. ನಾಯಕತ್ವದ ಕೊರತೆ ಕಾಂಗ್ರೆಸ್ ಗೆ ಎದ್ದು ಕಾಣ್ತಾ ಇದೆ ಗುಜರಾತ್ ನಲ್ಲಿ ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಗೆ ನಾಯಕತ್ವದ ಕೊರತೆ ಇದೆ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ನವರ ಆಡಳಿತ ಅಸಮರ್ಪಕವಾಗಿ ಇದ್ದದ್ದನ್ನು ಹಾಗೂ ಭ್ರಷ್ಟಾಚಾರ ದಲ್ಲಿ ಕರ್ನಾಟಕ ದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದ್ದು ಇದೇ ಯಡಿಯೂರಪ್ಪ ಅನ್ನೋದನ್ನು ಮರೆಯುವಂತಿಲ್ಲ,ಇದರ ಜೊತೆಗೆ ಒಬ್ಬ ಮುಖ್ಯಮಂತ್ರಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿರೋದು ಕರ್ನಾಟಕ ಇತಿಹಾಸ ದಲ್ಲೇ ಮೊದಲು ಆದ್ದರಿಂದ ಯಡಿಯೂರಪ್ಪ ನವರಂತ ಭ್ರಷ್ಟ,ಅಸಮರ್ಥ ನಾಯಕನನ್ನು ಬೆಂಬಲಿಸುವ ಬದಲು ಕುಮಾರಸ್ವಾಮಿ ಅವರನ್ನು ಬೆಂಬಲಿಸಬಹುದು.

೬. ಸುಳ್ಳು ಸಮೀಕ್ಷೆ ಗುಜರಾತ್ ನಲ್ಲಿ ಕಾಂಗ್ರೆಸ್ 40 ಸ್ಥಾನ ಗಳಿಸುತ್ತೆ ಅಂತ ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ವರದಿ ಮಾಡಿದ್ವು ಆದರೆ ಆ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಹೊಡಿದಿರೋದು ಕರ್ನಾಟಕ ದಲ್ಲಿ ಜನತಾದಳಕ್ಕೆ ವರದಾನವಾಗಿದೆ, ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆ ಗಳಲ್ಲಿ ಜನತಾದಳ ಕಿಂಗ್ ಮೇಕರ್ ಆಗಲಿದೆ ಅನ್ನೋ ಸಮೀಕ್ಷೆ ಯನ್ನು ಮೀರಿ ಜನತಾದಳ ಈ ಬಾರಿ ಕಿಂಗ್ ಆಗಲಿದೆ.

೭. ಕನ್ನಡದ ಅಸ್ಮಿತೆ ಗಾಗಿ ಪ್ರಾದೇಶಿಕ ಪಕ್ಷ ಗಳನ್ನು ಬೆಂಬಲಿಸಬೇಕು, ಒಕ್ಕೂಟ ವ್ಯವಸ್ಥೆಯ ಅರ್ಥವನ್ನೇ ಮರೆತಿರುವ, ಸಂವಿಧಾನದ ದಿಕ್ಕನ್ನೇ ಬದಲಿಸಲು ಹೊರಟಿರುವ ಬಿಜೆಪಿ ಪಕ್ಷ ಕ್ಕೆ ಪಾಠ ಕಲಿಸಬೇಕಾದರೆ‌ ಒಂದು ಪ್ರಬಲವಾದ ಸ್ಥಳೀಯ ಪಕ್ಷ ಅತ್ಯಗತ್ಯ ವಾಗಿದೆ ಇದರಿಂದ ನಾವು ಒಕ್ಕೂಟ ವ್ಯವಸ್ಥೆಯ ಶಕ್ತಿಯನ್ನು ಎತ್ತಿ ಹಿಡಿಯುವುದರ ಜೊತೆಗೆ ಕನ್ನಡ ವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಹುದು.

೮. ಕಾಂಗ್ರೆಸ್ ನಾ ದುರಾಡಳಿತ ದಿಂದ ರಾಜ್ಯದ ಜನ ಬೇಸತ್ತಿರುವುದಂತೂ ಸುಳ್ಳಲ್ಲ, ಉದ್ಯೋಗ ಸೃಷ್ಟಿ ಯಲ್ಲಿ,ಬಡತನ ನಿರ್ಮೂಲನೆ ಮಾಡುವಲ್ಲಿ, ಸರ್ಕಾರಿ ಯೋಜನೆಗಳು ಕರ್ನಾಟಕದ ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಮತ್ತೊಮ್ಮೆ ಕರ್ನಾಟಕ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಮುಂದುವರೆಯುವುದಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ಯ ಕಿತ್ತಾಟದಿಂದ ಕರ್ನಾಟಕದ ಅಭಿವೃದ್ಧಿ ಕುಠಿತವಾಗಲಿದೆ.ಹಾಗಾಗಿ ಮತದಾರರು ಕಾಂಗ್ರೆಸ್ ಹಾಗೂ ಬಿಜೆಪಿ ಯೇತರ ಪಕ್ಷಗಳಿಗೆ ಮತ ಹಾಕಿದ್ರೆ ಕರ್ನಾಟಕದ ಅಭಿವೃದ್ಧಿ ಗೆ ಸಹಾಯವಾಗಲಿದೆ.

– ಅರುಣ್ ಕೆಚ್ಚೆದೆ ಕನ್ನಡಿಗ

Leave a Reply