ಕನ್ನಡಕ್ಕೆ ಬರಲಿರುವ ‘ಕ್ವೀನ್’ …

ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದ ಯಶಸ್ವಿ ಕ್ವೀನ್ ಚಿತ್ರದ ಕನ್ನಡ ಮತ್ತು ತಮಿಳು ಅವತರಣಿಕೆ ಚಿತ್ರದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.

ಕನ್ನಡದ ಆವತರಣಿಕೆ ಬಟರ್ ಫ್ಲೈ ಚಿತ್ರದಲ್ಲಿ ಪಾರುಲ್ ಯಾದವ್ ಅಭಿನಯಿಸುತ್ತಿದ್ದರೆ ತಮಿಳಿನ ಆವತರಣಿಕೆಯಲ್ಲಿ ಕಾಜೋಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಸದ್ಯ ಚಿತ್ರತಂಡ ಗೋಕರ್ಣಾದಲ್ಲಿ ಬಿಡುಬಿಟ್ಟಿದ್ದು ಬಟರ್ ಫ್ಲೈ ಚಿತ್ರದ ಕೆಲ ಭಾಗದ ಚಿತ್ರೀಕರಣವನ್ನು ಪೂರೈಸಿದೆ. ಇನ್ನ ಕನ್ನಡ ಮತ್ತು ತಮಿಳು ಆವತರಣಿಕೆಯ ಎರಡು ಚಿತ್ರಗಳ ಚಿತ್ರೀಕರಣಕ್ಕೆ ಚಿತ್ರತಂಡ ವಿದೇಶಕ್ಕೆ ತೆರಳಲಿದೆ.

ರಮೇಶ್ ಅರವಿಂದ್ ಈ ಹಿಂದೆ ಚಿತ್ರದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಪಾರುಲ್ ಯಾದವ್ ಲಂಗಾ ಬ್ಲೌಸ್ ನಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್ ಅವರು ಹಿಂದಿಯ ಬಾಷೆಯ ಕ್ವೀನ್ ಗಿಂತ ಈ ಚಿತ್ರ ಭಿನ್ನವಾಗಿತ್ತದೆ ಎಂದು ಹೇಳಿದ್ದಾರೆ.

ಬಟರ್ ಫ್ಲೈ ಚಿತ್ರದ ಮೂಲಕ ಕನ್ನಡಕ್ಕೆ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಿಂದಿ ಕ್ವೀನ್ ಚಿತ್ರಕ್ಕಿಂತ ಭಿನ್ನವಾಗಿ ಹೊಸ ರಾಗಗಳನ್ನು ಸಂಯೋಜನೆ ಮಾಡಿದ್ದಾರೆ ಎಂದರು.

ಕೃಪೆ : ಕನ್ನಡ ಪ್ರಭ

Leave a Reply