ಅಪ್ಪಾಜಿಯ ಸರಳತೆಗೆ ಸಮಾನರಾಗಿರುವ ಪುನೀತ್ …

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಷ್ಟು ಸರಳ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದ್ದು, ಹೈವೆ ಪಕ್ಕದಲ್ಲಿನ ಹೋಟೆಲ್ ನಲ್ಲಿ ತಿಂಡಿ ಸವಿದಿದ್ದಾರೆ.

ಹೌದು, ಟಗರು ಚಿತ್ರದ ಆಡಿಯೋ ಬಿಡುಗಡೆಗೆ ಹೋಸಪೇಟೆಗೆ ಹೋಗಿದ್ದ ಪುನೀತ್ ರಾತ್ರಿ ಲೇಟಾಗಿದ್ದರಿಂದ ಅಲ್ಲಿಂದ ಬೆಂಗಳೂರಿಗೆ ಮರಳಲು ಆಗಲಿಲ್ಲ. ಬೆಳಗ್ಗೆ ಬೇಗ ಎದ್ದು ಅಲ್ಲಿಂದ ಹೊರಟಿದ್ದಾರೆ. ತಿಂಡಿ ತಿನ್ನದೇ ಪ್ರಯಾಣ ಆರಂಭಿಸಿದ ಅಪ್ಪು ಆಯಂಡ್ ಟೀಂ ದಾರಿಯಲ್ಲಿ ಮೊಬೈಲ್ ಕ್ಯಾಂಟಿನ್ ನಲ್ಲಿ ನಿಂತು ತಿಂಡಿ ತಿಂದಿದ್ದಾರೆ.

ಒಂದೇ ಸಲ ಕಾರು ನಿಲ್ಲಿಸಿ ಮೊಬೈಲ್ ಕ್ಯಾಂಟೀನ್ ಗೆ ಬಂದ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಕ್ಯಾಂಟೀನ್ ಮಾಲೀಕನಿಗೆ ಶಾಕ್ ಆಗಿದೆ. ಓಡಾಡುತ್ತಿದ್ದ ಜನರೂ ಕುತೂಹಲದಿಂದ ಪುನೀತ್ ಅವರನ್ನು ಮಾತನಾಡಿಸಿ ಖುಷಿ ಪಟ್ಟಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply