ಮದುವೆಗೆ ಸಿದ್ದರಾಗಿರುವ ಶುಭ ಪೂಂಜಾ…

ನನಗೂ ನನಗೂ ಒಬ್ಬ ಗೆಳೆಯ ಬೇಕು ಎಂದು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಹಾಡಿ ಕುಣಿದ ಚೆಲುವೆ ಶುಭ ಪೂಂಜಾ ಈಗ ಸುದ್ದಿಯಲ್ಲಿದ್ದಾರೆ. ಅದು ಕೂಡ ಮದುವೆ ಸುದ್ದಿ.

ಯೆಸ್, ಅದು ಸಿನಿಮಾದಲ್ಲಿ ಅಲ್ಲ. ಬದಲಾಗಿ ರೀಲ್ ಲೈಫ್ ನಲ್ಲಿ. 2018ಕ್ಕೆ ಮದುವೆಯಾಗಬೇಕು ಅನ್ನೋದು ಶುಭಾ ಅವರ ಯೋಚನೆಯಂತೆ. ಸ್ಯಾಂಡಲ್ ವುಡ್ ನ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿ ಶುಭಾ ಪೂಂಜಾ ಮದುವೆಯಾಗುವ ಮನಸ್ಸು ಮಾಡಿದ್ದಾರೆ.

ಅಂದಹಾಗೆ..ಶುಭಾ ಅವರನ್ನು ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ.., ಪ್ರಾಣಿಗಳನ್ನು ಪ್ರೀತಿಸುವ ಗುಣವುಳ್ಳ, ಮಹತ್ವಾಕಾಂಕ್ಷೆಗಳೇನೂ ಇರದ, ಸ್ವಲ್ಪ ಗೋಧಿಬಣ್ಣದ ಮೈಕಟ್ಟು ಹೊಂದಿರುವ ಒಳ್ಳೆಯ ಮನುಷ್ಯನಾಗಿರುವ ಹುಡುಗಬೇಕಂತೆ. ಈ ಗುಣಗಳಿರುವ ಹುಡುಗ ನೀವಾಗಿದ್ದರೆ..ಅಥವಾ ಆ ಹುಡುಗ ನಿಮಗೆ ಸಿಕ್ಕಿದರೆ ಶುಭಾ ಅವರಿಗೆ ಹೇಳಿ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply