ಭೀಮಾ ಕೊರೆಗಾಂವ್ ದಲಿತರ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ, ಜನವರಿ 2: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಹಿನ್ನಲೆಯಲ್ಲಿ ಇಂದು ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಇವು ದಲಿತರ ಪ್ರತಿರೋಧದ ಸಂಕೇತ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಆರ್ ಎಸ್ಎಸ್ / ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನದ ಪ್ರಮುಖ ಅಂಶವೆಂದರೆ ದಲಿತರು ಯಾವತ್ತೂ ಭಾರತೀಯ ಸಮಾಜದ ಕೆಳಭಾಗದಲ್ಲಿ ಇರಬೇಕು. ಉನಾ, ರೋಹಿತ್ ವೆಮುಲಾ ಮತ್ತು ಈಗ ಭೀಮಾ-ಕೊರೆಗಾಂವ್ಗಳು ದಲಿತರ ಪ್ರತಿರೋಧದ ಪ್ರಬಲ ಸಂಕೇತಗಳಾಗಿವೆ,” ಎಂದು ಹೇಳಿದ್ದಾರೆ.

ಇನ್ನು ಭೀಮ ಕೊರೆಗಾಂವ್ ಸಂಘರ್ಷಕ್ಕೆ ಜೆ.ಎನ್.ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಗುಜರಾತ್ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಪರೋಕ್ಷ ಕಾರಣವೆಂಬ ವಾದಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಉಭಯ ನಾಯಕರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

 tweet_dalit_prtotest.png

ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಭೀಮ ಕೊರೆಗಾವ್ ಕದನದ 200ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್, ಜಿಗ್ನೇಶ್ ಮೇವಾನಿ, ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ರಾಧಿಕಾ ವೆಮುಲಾ ಪಾಲ್ಗೊಂಡಿದ್ದರು. ಇದರ ಮರುದಿನ ಪುಣೆಯಲ್ಲಿ ಹಿಂಸಾಚಾರಕ್ಕೆ ಓರ್ವ ಬಲಿಯಾಗಿದ್ದ.

 

Leave a Reply