‘ಕುಮಾರಿ 21 F ‘ ನಲ್ಲಿ ದೇವರಾಜ್ ರವರ ದ್ವಿತೀಯ ಪುತ್ರ

ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಮೊದಲ ಮಗ ಪ್ರಜ್ವಲ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಗಲೇ ದಶಕಗಳು ಕಳೆದಿವೆ. ಇದೀಗ ಅವರ ದ್ವಿತಿಯ ಪುತ್ರ ಪ್ರಣಾಮ್ ಸಹ , ಚಿತ್ರರಂಗಕ್ಕೆ ಎಂಟ್ರಿ ಕೊಡಲು ತಯಾರಾಗಿದ್ದಾರೆ.

ಶ್ರೀ ಹಯಗ್ರೀವ ಕಲಾ ಚಿತ್ರ ಲಾಂಛನದಲ್ಲಿ, ಸಂಪತ್ ಕುಮಾರ ಅವರ ನಿರ್ಮಾಣದಲ್ಲಿ , ಕುಮಾರಿ 21 ಎಫ್ ಎಂಬ ಹೆಸರಿನ ಚಿತ್ರಕ್ಕೆ ಶ್ರೀಮನ್ ವೇಮುಲ ಅವರ ನಿರ್ದೇಶನವಿದ್ದು, ಪ್ರಣಾಮ್ ದೇವರಾಜ್ ಅವರೊಂದಿಗೆ ನಿಧಿ ಕುಶಾಲಪ್ಪ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

ಪ್ರಣಾಮ್ ಅವರು ಈ ಹಿಂದೆ ಅವರ ಅಣ್ಣ ಪ್ರಜ್ವಲ್ ಅವರ ನಟನೆಯ, ಅವರದೇ ಹೋಂ ಬ್ಯಾನರ್ ನ ನೀನಾದೆನಾ ಚಿತ್ರದ ಮದುವೆ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ನಂತರ ಹ್ಯಾಫಿ ನ್ಯೂ ಇಯರ್ ಚಿತ್ರದಲ್ಲೂ, ಇತರ ಕಲಾವಿದರಂತೆ ಅವರೂ ಸಹ ಚಿತ್ರದ ಟೈಟಲ್ ಹಾಡಿನಲ್ಲಿ ಕುಣಿದು ನಲಿದಿದ್ದರು. ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದು, ಚಿತ್ರ ತೆರೆ ಕಾಣಲು ಸಿದ್ದತೆ ನಡೆಸಿದೆ.

ಕೃಪೆ : ಬಾಲ್ಕನಿ ನ್ಯೂಸ್

Leave a Reply