ವ್ಯಕ್ತಿ ಒಬ್ಬರ ಜಾತಿ ಪ್ರಮಾಣ ಪಾತ್ರದಲ್ಲಿ ಕಿಚ್ಚ ಸುದೀಪ್ ಫೋಟೋ

ವ್ಯಕ್ತಿಯೊಬ್ಬರ ಜಾತಿ ಪ್ರಮಾಣ ಪತ್ರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಭಾವ ಚಿತ್ರ ಕಂಡಬಂದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ನಡೆದಿದೆ.

ನಾಲತವಾಡ ಪಕ್ಷದ ವೀರೇಶನಗರ ಗ್ರಾಮದ ಸಿದ್ದಲಿಂಗಪ್ಪ ಕಾಂತಪ್ಪ ಕೋಳೂರು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸಲ್ಲಿಸಿದ ನಂತರ ಕಡ್ಡಾಯವಾಗಿ ಅರ್ಜಿದಾರರ ಭಾವಚಿತ್ರವನ್ನೇ ಮುದ್ರಣಗೊಳಿಸಬೇಕು. ಅರ್ಜಿದಾರರು ಸಲ್ಲಿಸಿದ ಅರ್ಜಿ ನಮೂನೆ ಪರಿಶೀಲನೆಗೆ ಡೌನ್ ಲೋಡ್ ಮಾಡಿದಾಗ ಅರ್ಜಿದಾರರ ಭಾವಚಿತ್ರದ ಬದಲು ನಟ ಸುದೀಪ್ ಅವರ ಭಾವ ಚಿತ್ರಕಂಡಿದೆ.

ಇದನ್ನು ಕಂಡ ಸ್ವತಃ ಉಪ ತಹಸಿಲ್ದಾರರೇ ದಂಗಾದರು. ಕೂಡಲೇ ಜಾತಿ ಪ್ರಮಾಣಪತ್ರ ಅರ್ಜಿ ರದ್ದು ಪಡಿಸಿದ್ದರಲ್ಲೇ ಮಾಹಿತಿ ಕಲೆ ಹಾಕುವಂತೆ ಉಪತಹಸಿಲ್ದಾರ್ ಬಸವರಾಜ ಭದ್ರಣ್ಣವರಿಗೆ ಸೂಚಿಸಿದರು.

ಕೃಪೆ : ಕನ್ನಡ ನ್ಯೂಸ್ ನೌ

Leave a Reply