ನ್ಯಾಯಾಧೀಶ ಲೋಹಿಯಾ ನಿಗೂಢ ಸಾವು ಉನ್ನತ ಮಟ್ಟದ ತನಿಖೆಗೆ 470 ವಕೀಲರ ಆಗ್ರಹ.

ಪಂಜಾಬ್‌ : ಪಂಜಾಬ್‌ ಹಾಗೂ ಹರಿಯಾಣ ಕೋರ್ಟ್‌ನ ಸುಮಾರು 470 ಮಂದಿ ವಕೀಲರು, ನ್ಯಾ. ಲೋಯಾ ಅವರ ಸಾವಿನ ತನಿಖೆಯನ್ನು ಸಿಬಿಐ, ವಿಶೇಷ ತನಿಖಾ ತಂಡ ಅಥವಾ ತನಿಖಾ ಆಯೋಗಕ್ಕೆ ಸಲ್ಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ.

 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ, 2014ರಲ್ಲಿ, ಪ್ರಕರಣದ ಅಂತಿಮ ಹಂತದಲ್ಲಿ ಸಾವಿಗೀಡಾಗಿದ್ದರು. ಇವರ ಅಸಹಜ ಸಾವಿನ ಬಗ್ಗೆ ಅಂದಿನಿಂದಲೂ ಸಾಕಷ್ಟು ಅನುಮಾನುಗಳಿವೆ.

ಈ ಹಿನ್ನೆಲೆಯಲ್ಲಿ ಸುಪ್ರಿಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಇತರೆ ಕೋರ್ಟ್‌ನ ನ್ಯಾಯಾಧೀಶರಿಗೆ ವಕೀಲರು ಅರ್ಜಿ ಸಲ್ಲಿಸಿದ್ದು, ಲೋಯಾ ಅವರ ಸಾವು ಸಹಜವಾದುದಲ್ಲ ಆದ್ದರಿಂದ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಕೋರಿದ್ದಾರೆ.

ಹೈಪ್ರೊಫೈಲ್‌ ಪ್ರಕರಣಗಳಲ್ಲಿ ತೀರ್ಪು ನೀಡುವ ನ್ಯಾಯಾಧೀಶರ ಬದುಕು ಸುರಕ್ಷಿತವಲ್ಲ. ಅವರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಂದ ಮೇಲೆ ನ್ಯಾಯ ವ್ಯವಸ್ಥೆಯೇ ಅಪಾಯದಲ್ಲಿದ್ದಂತೆ ಎಂದಿದ್ದಾರೆ.

Leave a Reply