ಅಕ್ಷರ ಗೌಡ ಈಗ ಭಟ್ಟರ ಸಿನಿಮಾದಲ್ಲಿ ..

ಸಂಕ್ರಾಂತಿ ಹಬ್ಬ ಮುಗಿದ ನಂತರ ತಮ್ಮ ಮುಂದಿನ ಸಿನಿಮಾದ ಕೆಲಸ ಆರಂಭಿಸಲಿರುವ ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ನಾಯಕನಾಗಿ ವಿಹಾನ್ ಗೌಡ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ನಾಯಕಿಯಾಗಿ ಕನ್ನಡದ ನಟಿ ಅಕ್ಷರಾ ಗೌಡ ಅವರನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಅಕ್ಷರಾ ಈಗಾಗಲೇ ಕೆಲವು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಯೋಗರಾಜ್ ಭಟ್ಟರ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಲ್ಲಿ ಅಕ್ಷರಾ ಒಬ್ಬರು. ಇನ್ನೊಬ್ಬ ನಾಯಕಿಗಾಗಿ ಮಾತುಕತೆ ನಡೆಯುತ್ತಿದೆ. ಚಿತ್ರದಲ್ಲಿ ಅಕ್ಷನಾ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಕೂಡ, ಪಾತ್ರದ ತೋರಿಕೆ ಮತ್ತು ಪಾತ್ರದಲ್ಲಿ ಹುಡುಗಿಯ ವರ್ತನೆ ದ್ರೌಪದಿಗೆ ಹೋಲುತ್ತದೆ ಎನ್ನುತ್ತಾರೆ ನಿರ್ದೇಶಕರು.

ಕೃಪೆ : ಕನ್ನಡ ಪ್ರಭ

Leave a Reply