ಡಿಸೆಂಬರ್ ನಲ್ಲಿ ವೈರಲ್ ಆದ ಸುದ್ದಿಗಳ ಸತ್ಯತೆ

೧) ಸೀ ಪ್ಲೇನ್ ನಲ್ಲಿ ಪ್ರಯಾಣ ಮಾಡಿದ ಮೊದಲ ಭಾರತೀಯ ಮೋದಿ ?

ಪ್ರಧಾನಿ ಮೋದಿ ಸೀ ಪ್ಲೇನ್ ನಲ್ಲಿ ಅಹಮದಾಬಾದ್ ನಿಂದ ಮೆಹಸಾನಾ ಪ್ರಯಾಣ ಮಾಡಿದ್ರು , ಈ ವಿಷಯವನ್ನ ಮೋದಿಯವರ ವೆಬ್ ಸೈಟ್ http://www.narendramodi .in ಅಲ್ಲಿ ಹೇಳಿಕೊಂಡಿದ್ದರು . ಅದು ಬಿಜೆಪಿ ಮುಖಂಡರು ಮತ್ತು ಮೈನ್ಸ್ಟ್ರೀಮ್ ಮೀಡಿಯಾ ಹೌಸ್ ಗಳು ಪ್ರಸಾರ ಮಾಡಿದ್ರು.ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದಿದೆ. ಜಲ್ ಹಂಸ್ ಎಂಬ ಸಂಸ್ಥೆ 2010 ರಲ್ಲಿ ಅಂಡಮಾನ್ ನಿಕೋಬಾರ್ ನಲ್ಲಿ ನಿಯೋಜಿಸಿತ್ತು.

modiseaplanepapers

೨) ಮಾನ್ಯ ವಾಜಪೇಯೀ ಮೆಟ್ರೋ ದಲ್ಲಿ ಪ್ರಯಾಣಿಸಿದ ಮೊದಲ ಪ್ರಯಾಣಿಕ ?
ಸೀ ಪ್ಲೇನ್ ನಂತರ ತಮ್ಮ ಭಾಷಣದಲ್ಲಿ ಮೋದಿಯವರು 2002 ರಲ್ಲಿ ಪ್ರಾರಂಬಿಸಲ್ಪಟ್ಟ ಡೆಲ್ಲಿ ಮೆಟ್ರೋ ವಾಜಪಯೀ ಮೊದಲ ಪ್ರಯಾಣಿಕ ಎಂದು ಹೇಳಿದರು. ಆದರೆ ದೇಶದ ಮೊದಲ ಮೆಟ್ರೋ ಸೇವೆ ಶುರುವಾಗಿದು 1984 ರಲ್ಲಿ ಕೋಲ್ಕತಾದಲ್ಲಿ .

metroinauguration

೩) ರಾಹುಲ್ ಗಾಂಧಿ ಸೋಮನಾಥ್ ಟೆಂಪಲ್ ಸಹಿ ಮಾಡಿದು ಹಿಂದುಯೇತರ ಕಾಲಂ ನಲ್ಲಾ?

ಗುಜರಾತ್ ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ಸೋಮನಾಥ್ ದೇವಸ್ಥಾನ ಭೇಟಿ ನೀಡಿದ ಸಮಯದಲ್ಲಿ ಹಾಕಿದ ಸಹಿ ಹಿಂದುಯೇತರ ರಿಜಿಸ್ಟರ್ ನಲ್ಲಿ ಸಹಿ ಹಾಕಿದ್ದಾರೆ ಎಂದು zee gujarat ನ ಸಂಪಾದಕ ಮೊದಲ ಬಾರಿ ಪ್ರಕಟಿಸಿದರು. ಇದು ದೇಶಾದ್ಯದಂತ ಮೀಡಿಯಾ ದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ನಂತರ ತಿಳಿದಿದ್ದು ರಾಹುಲ್ ಗಾಂಧಿ ಹೆಸರಲ್ಲಿ ಬೇರೆ ಯಾರೋ ಸಹಿ ಹಾಕಿದಾರೆ, ರಾಹುಲ್ ಗಾಂಧಿಯವರು ನಿಯಮಿತ ರಿಜಿಸ್ಟರ್ ನಲ್ಲಿ ಸಹಿಹಾಕಿದ್ದಾರೆ ಎಂದು.

rahulsomnathentry

೪) ಪಶುವೈದ್ಯ ವಿಧಾನವನ್ನು ಹಸುಗೆ ಚಿತ್ರಹಿಂಸೆ ಅಂದು TIMESNOW ಸುದ್ದಿವಾಹಿನಿ ಪ್ರೈಮ್ ಟೈಮ್ ಡಿಬೇಟ

#CowSlaughterCruelty ಎಂಬ ಹ್ಯಾಶ್ಟ್ಯಾಗ್ ನೊಂದಿಗೆ TIMESNOW ಸುದ್ದಿವಾಹಿನಿ ಪ್ರೈಮ್ ಟೈಮ್ ಡಿಬೇಟ ನೆಡೆಸಿತ್ತು. ಇದರಲ್ಲಿ ಹಸುಗೆ ಹೇಗೆ ಚಿತ್ರಹಿಂಸೆ ಕೊಡಲಾಗಿದೆ ಎಂದು ಪ್ರಕಟಿಸಿತ್ತು. ಆದರೆ ಇದು ಗರ್ಭಿಣಿ ಹಸುಗೆ ನೀಡುವ ಒಂದು ಪಶುವೈದ್ಯ ವಿಧಾನ.

timesnowanimal

೫) ಚಿತ್ರ ಹಿಂಸೆ ಕೊಟ್ಟು ಪರೇಶ್ ಮೆಹ್ತಾ ಕೊಲೆ ನೆಡದಿದೆ ಎಂದು ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ .

ಪರೇಶ್ ಮೆಹ್ತಾ ಮೃತ ದೇಹ ಸಿಕ್ಕಿದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಒಂದು ಕೆರೆಯಲ್ಲಿ. ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು BJP ಸಂಸದೆ ಶೋಭಾ ಕರಂದ್ಲಾಜೆ .ಕ್ರೂರವಾಗಿ ಚಿತ್ರಹಿಂಸೆ ಕೊಟ್ಟು ಜಿಹಾದಿಗಳು ಕೊಂದಿದಾರೆ ಎಂದು ಟ್ವೀಟ್ ಮಾಡಿದರು. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಯಾವ ಚಿತ್ರಹಿಂಸೆ ಬಗ್ಗೆ ಉಲ್ಲೇಖವಿಲ್ಲ ಎಂದು ಪೊಲೀಸ್ ಸ್ಪಷ್ಟಪಡಿಸಿದ್ದಾರೆ.

shoba

೬) ಬಿಜೆಪಿ ಎಂಪಿ ಕಿರೊನ್ ಖೇರ್ ಶೇರ್ ಮಾಡಿದ ಫೋಟೋದ ಸತ್ಯತೆ ಎಷ್ಟು ?.
ಭಾರತ ಸೈನಿಕರು ಅತ್ಯಂತ ತಂಪಾದ ಹವಾಮಾನದಲ್ಲಿ ಸಿಯಾಚಿನ್ ಪ್ರದೇಶದಲ್ಲಿ ಇರುವುದರರ ಬಗೆ. ಈ ಹಿಂದೆ ಕೂಡ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ರಶಿಯಾ ಸೈನಿಕರ ಫೋಟೋ

kiron

 

Leave a Reply