ಜಗ್ಗೇಶ್ ಪತ್ನಿ ಪರಿಮಳಾ ಅವರು ಕಿರುತೆರೆಯಲ್ಲಿ ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ಇದೇ ಮೊದಲ ಬಾರಿಗೆ ಪ್ರೇಕ್ಷಕರೆದುರು ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ಹೌದು, ಈ ಕಾರ್ಯಕ್ರಮದಲ್ಲಿ ಅವರು ಮಹಿಳೆಯರಿಗೆ ಬೇಕಾಗುವ ಅನೇಕ ಸಲಹೆಗಳನ್ನು ನೀಡಲಿದ್ದಾರೆ. ಇಷ್ಟು ದಿನ ಅವರು ಅನುಸರಿಸಿಕೊಂಡು ಬಂದ ಜೀವನಶೈಲಿ, ಫಿಟ್ ನೆಸ್ , ಕಿಚನ್ ಟಿಪ್ಸ್ ಎಲ್ಲದರ ಬಗ್ಗೆಯೂ ಅವರು ಟಿಪ್ಸ್ ನೀಡಲಿದ್ದಾರೆ.
ಇನ್ನು ಕುರಿತು ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವರು, ಅವಳ ಪ್ರಾಮಾಣಿಕ ಪ್ರಯತ್ನಕ್ಕೆ ರಾಯರಪೂಜೆ ಎಂದು ಭಾವಿಸುವೆ ಎಂದು ಟ್ವೀಟ್ ಮಾಡಿದ್ದಾರೆ.
ಕೃಪೆ : ಕನ್ನಡ ನ್ಯೂಸ್ ನೌ