ಸ್ಯಾಂಡಲ್ ವುಡ್ ನಲ್ಲಿ ಜಗ್ಗೇಶ್ 8mm ಆರ್ಭಟ …

 ದಿನದ ಜರ್ನಿನೇ ಬೇರೆ ಇನ್ನೂ ಮುಂದಿನ ಜರ್ನಿನೇ ಬೇರೆ ಅನ್ನುವ ನವರಸ ನಾಯಕ ಜಗ್ಗೇಶ್, ಕೈಯಲ್ಲಿ ೮ಎಂಎಂ ಸೈಜ್ ಬುಲೇಟ್ ಇರೋ ಗನ್ ಹಿಡಿದು ಖಡಕ್ ಲುಕ್ ಕೊಟ್ಟಿರೋದನ್ನ ಈಗಾಗ್ಲೆ ಅವರ ಚಿತ್ರ ೮ಎಂಎಂ ನ ಟೀಸರ್‌ನಲ್ಲಿ ನೋಡಿದ್ದೀರಾ. ಜಗ್ಗೇಶ್ ಸಿನಿ ಜರ್ನಿಯಲ್ಲಿ ಈ ಹಿಂದೆ ಮಾಡಿರದ ಒಂದು ವಿಶೇಷ ಪಾತ್ರವನ್ನ ಈ ೮ಎಂಎಂ ಚಿತ್ರದಲ್ಲಿ ಮಾಡುತ್ತಿದ್ದಾರೆ.
ಹರಿಕೃಷ್ಣ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ೮ಎಂಎಂ ಚಿತ್ರದ ಟೀಸರ್‌ನಿಂದ್ಲೆ ಒಂಥರಾ ಕಿಕ್ ಕೊಡುತ್ತಿದೆ, ಯಾಕಂದ್ರೆ ಈ ಚಿತ್ರದಲ್ಲಿ ಜಗ್ಗೇಶ್ ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದು ಪ್ರೇಕ್ಷಕರಿಗೆ ಬೇರೆಯದ್ದೇ ರೀತಿಯಲ್ಲಿ ಈ ಚಿತ್ರವನ್ನ ಪ್ರೆಸೆಂಟ್ ಮಾಡೋದು ಜಗ್ಗೇಶ್ ಅಭಿಪ್ರಾಯ. ಇವರ ಜೊತೆಗೆ ರಾಕ್‌ಲೈನ್ ವೆಂಕಟೇಶ್ ಮತ್ತು ವಶಿಷ್ಟ ಸಿಂಹ ಕೂಡಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇದೆಲ್ಲ ಓಕೆ ಇವಾಗ ಇದು ಗೊತ್ತಿರೋ ವಿಷಯ ಹೊಸದೇನಿದೆ ಅಂತಾ ಅನ್ನುವಷ್ಟರಲ್ಲೇ ಥಟ್ ಅಂತಾ ನಟಿ ಮಯೂರಿ ಎಂಟ್ರಿ ಕೊಟ್ರು. ಮಯೂರಿ ಇದೇ ಮೊದಲ ಬಾರಿಗೆ ಜಗ್ಗೇಶ್ ಜೊತೆಯಲ್ಲಿ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರತಂಡ ೮ಎಂಎಂ ಗಾಗಿ ನಟಿಯ ಹುಡುಕಾಟದಲ್ಲಿದ್ದಾಗ ಸ್ವತ:ಹ ನವರಸ ನಾಯಕ ಜಗ್ಗೇಶ್,  “ಪತ್ರಕರ್ತೆ”ಯ ಪಾತ್ರಕ್ಕೆ ಮಯೂರಿ ಸೂಟ್ ಆಗ್ತಾರೆ ಅಂತಾ ಚಿತ್ರತಂಡಕ್ಕೆ ಸಲಹೆ ಕೊಟ್ಟಿದ್ರಂತೆ.
ಈಗಾಗ್ಲೇ ಕೃಷ್ಣಲೀಲಾ, ಕರಿಯಾ ೨, ನಟರಾಜ್ ಸರ್ವಿಸ್, ಮತ್ತು ಇಷ್ಟ ಕಾಮ್ಯ ಚಿತ್ರದಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನ ಕದ್ದಿರೋ ಮಯೂರಿ ಕರ್ನಾಟಕದ ಮನೆಮಾತಾಗಿರೋ ನಟಿ. ತಮ್ಮ ನಟನೆಯ ಮೂಲಕವೇ ತಮ್ಮದೇ ಆದ ಅಭಿಮಾನಿಗಲನ್ನ ಹೊಂದಿರುವ ಮಯೂರಿ ಇದೇ ಮೊದಲ ಬಾರಿಗೆ ಜಗ್ಗೇಶ್ ಜೊತೆಯಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ,
ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂಬ ಚಿತ್ರದಲ್ಲಿ ಬ್ಯುಸಿಯಾಗಿರುವ ಮಯೂರಿ, ಜೊತೆಗೆ ಈ ೮ಎಂಎಂ ನಲ್ಲೂ ಪತ್ರಕರ್ತೆಯಾಗಿ ಮಿಂಚಲಿದ್ದಾರೆ. ಸದ್ಯ ಟೀಸರ್ ಮೂಲಕವೇ ಈ ಚಿತ್ರ ಸಾಕಷ್ಟು ಸೌಂಡ್ ಮಾಡುತ್ತಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣವನ್ನು ಮುಗಿಸಿ ತೆರೆಗೆ ಬಂದ ನಂತರ ೮ಎಂಎಂ ಬುಲೆಟ್ ಹೇಗೆ ಸದ್ದು ಮಾಡುತ್ತೆ ಅಂತಾ ಕಾದುನೋಡಬೇಕು.
ಕೃಪೆ : ಬಾಲ್ಕನಿ ನ್ಯೂಸ್

Leave a Reply