ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ದರಾಗಿರುವ ನಟಿ ಭಾವನಾ

ಭಾನುವಾರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವಿಷಯ ಹೇಳಿದರು. ಇದೇ ವೇಳೆ ಅವರು ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಟರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ಗಿ ತಿಳಿಸಿದರು.

ಇದೇ ವೇಳೆ ಮಾತನಾಡುತ್ತ ಅವರು ತಾವು ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆಮಾತನಾಡುತ್ತ ನನಗೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಮನಸ್ಸು ಇದೆ ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಟರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೇ ಬರಲು ಇಷ್ಟಪಡುತ್ತೆನೆ ಎಂದರು.

ಇನ್ನು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಇಮೇಜ್ ನಿಂದ ಹೆಸರು ಮಾಡಿರುವ ನಟಿ ಭಾವನ ಮೂಲತಃ ಚಿತ್ರದುರ್ಗ ನಗರದ ಬುರುಜನಹಟ್ಟಿ ಬಡಾವಣೆಯ ನಿವಾಸಿಯಾಗಿದ್ದು ಹೀಗಾಗಿ ಇಲ್ಲಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದು, ಹೈಕಮಾಂಡ್ ಈ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply