ಶೀಘ್ರದಲ್ಲಿ ಸ್ಯಾಂಡಲ್ ವುಡ್ ಗೆ ದಂಡುಪಾಳ್ಯ-3

ಬಹು ನಿರೀಕ್ಷಿತ ದಂಡುಪಾಳ್ಯ-3 ಚಿತ್ರ ಜ. 19 ರಂದು ಬಿಡುಗಡೆಯಾಗುತ್ತಿದೆ.

ದಂಡುಪಾಳ್ಯ ಹಂತಕರ ಕುರಿತ ಈ ಸರಣಿ ಚಿತ್ರಗಳ ಮೊದಲ ಭಾಗದಲ್ಲಿ ದಂಡುಪಾಳ್ಯ ಹಂತಕರು ಮಾಡಿದ ಅಟ್ಟಹಾಸ ತೋರಿಸಿದರೆ, ಎರಡನೇ ಭಾಗದಲ್ಲಿ ಪೊಲೀಸರು ಹೇಗೆ ದಂಡುಪಾಳ್ಯ ಹಂತಕರನ್ನು ಫಿಟ್ ಮಾಡಿದರು ಎಂಬುದನ್ನು ತೋರಿಸಲಾಗಿತ್ತು. ಇನ್ನೂ, ದಂಡುಪಾಳ್ಯ-3 ಭಾಗ ಯಾವ ರೀತಿ ಇರುವುದು ಎಂಬ ಕುತೂಹಲ ಮೂಡಿದೆ.

ಸಿನಿಮಾದಲ್ಲಿ ಚಿತ್ರದಲ್ಲಿ ಪೂಜಾಗಾಂಧಿ, ರವಿಶಂಕರ್, ಮಕರಂದ್ ದೇಶಪಾಂಡೆ, ರವಿಕಾಳೆ, ಶ್ರುತಿ, ಮುನಿ, ಪೆಟ್ರೋಲ್ ಪ್ರಸನ್ನ ಸಂಜನಾ, ಕರಿಸುಬ್ಬು, ಡ್ಯಾನಿ ಮುಂತಾದವರು ಅಭಿನಯಿಸಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply