‘ರಾಣ’ ಚಿತ್ರದ ಫಸ್ಟ್ ಪೋಸ್ಟರ್ ಇಂದು ಬಿಡುಗಡೆ.

‘ಗಜಕೇಸರಿ’, ‘ಗೂಗ್ಲಿ’, ‘ರಾಮಾಚಾರಿ’ ಚಿತ್ರಗಳನ್ನ ನಿರ್ಮಾಣ ಮಾಡಿದ ಜಯಣ್ಣ ಹಾಗೂ ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಜಯಣ್ಣ ಮತ್ತು ಯಶ್ ಕಾಂಬಿನೇಶನ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳು ಬಂದಿವೆ. ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ರಾಕಿಂಗ್ ಸ್ಟಾರ್ ಯಶ್ ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್ ಗಳ ಬರ್ತಡೇ ಅಂದರೆ ಹೊಸ ಚಿತ್ರಗಳು ಅನೌನ್ಸ್ ಆಗುವುದು ಕಾಮನ್ ವಿಚಾರ. ಯಶ್ ಬರ್ತಡೇ ವಿಶೇಷವಾಗಿ ನೃತ್ಯ ನಿರ್ದೇಶಕ ಹರ್ಷ ಹಾಗೂ ಯಶ್ ಕಾಂಬಿನೇಷನ್ ನ ‘ರಾಣ’ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಆಗಿದೆ.

ರಾಣ ಚಿತ್ರದಲ್ಲಿ ಯಶ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಈ ಹಿಂದೆ ಹರಿದಾಡಿತ್ತು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕೆ ಜಿ ಎಫ್ ಲುಕ್ ನಲ್ಲೇ ಇದ್ದಾರೆ ಯಶ್. ಹರ್ಷ ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡುವ ಸ್ವಾಮಿ ಈ ಪೋಸ್ಟರ್ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಸಕ್ಸಸ್ ಫುಲ್ ಜೋಡಿ ಒಂದಾಗಿರುವುದು ಮತ್ತೊಂದು ಹಿಟ್ ಸಿನಿಮಾ ನೀಡುವುದಂತು ಪಕ್ಕಾ ಆಗಿದೆ.

ಕೃಪೆ : ಫಿಲ್ಮಿಬೀಟ್

Leave a Reply