50 ಲಕ್ಷಕ್ಕೂ ಹೆಚ್ಚು ಜನರ ವಿಶ್ ಪಡೆದ ರಾಜು ಕನ್ನಡ ಮೀಡಿಯಂ ..

ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕನ್ನಡ ಮೀಡಿಯಂ ರಾಜು ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದೆ. ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಯೆಸ್, ಚಿತ್ರದ ಟ್ರೇಲರ್ ದಾಖಲೆ ಬರೆದಿದ್ದು, ಯೂಟ್ಯೂಬ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗೆ 50 ಲಕ್ಷಕ್ಕೂ ಹೆಚ್ಚು ಜನ ವಿಶ್ ಮಾಡಿದ್ದಾರೆ. ಚಿತ್ರದ ಟ್ರೇಲರ್ ಮೆಚ್ಚಿಕೊಂಡಿದ್ದಾರೆ.

ರಾಜು ಕನ್ನಡ ಮೀಡಿಯಂ ಚಿತ್ರ ಕಾಮಿಡಿ ಮತ್ತು ರೋಮ್ಯಾಂಟಿಕ್ ಮಿಶ್ರಣ ಹೊಂದಿರುವ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕನಾಗಿ ಗುರುನಂದನ್ ನಟಿಸಿದ್ದಾರೆ. ಗುರುನಂದನ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಹಾಗೂ ಅವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply