ಪೆಂಟ್ ಹೌಸ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್ ..

ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ತಮ್ಮನ್ನು ತೊಡಗಿಸಿಕೊಂಡಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿ ಮನೆ ಮಾತಾಗಿದ್ದಾರೆ.

ಇತ್ತೀಚೆಗಷ್ಟೇ ದುಬಾರಿ ಬೆಲೆಯ 3 ಕಾರುಗಳನ್ನು ಯಶ್ ಖರೀದಿಸಿದ್ದರು. ತಂದೆ -ತಾಯಿ, ಪತ್ನಿ ರಾಧಿಕಾ ಪಂಡಿತ್ ಹಾಗೂ ತಮಗಾಗಿ ಅವರು ಕಾರುಗಳನ್ನು ಖರೀದಿಸಿದ್ದರು.

ಈಗ ಅವರು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರೆಸ್ಟಿಜ್ ಆಬ್ಸಹಾಟ್ ಅಪಾರ್ಟ್ ಮೆಂಟ್ ನ 2 ಪೆಂಟ್ ಹೌಸ್ ಗಳನ್ನು ಅವರು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 25 -30 ಕೋಟಿ ರೂ. ಎನ್ನಲಾಗಿದೆ.

ಇದೇ ಅಪಾರ್ಟ್ ಮೆಂಟ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಶಾಸಕ ಅನಿಲ್ ಲಾಡ್, ಶ್ರೀಮಂತ ನಾಯಕರು, ಉದ್ಯಮಿಗಳು ವಾಸವಾಗಿದ್ದಾರೆ. ಅಪಾರ್ಟ್ ಮೆಂಟ್ ನ ತುದಿಯಲ್ಲಿ ಯಶ್ ಪೆಂಟ್ ಹೌಸ್ ಖರೀದಿಸಿದ್ದು, ಅಲ್ಲಿಂದ ವಿಧಾನಸೌಧ, ಸಿ.ಎಂ. ನಿವಾಸ, ಗಾಲ್ಫ್ ಹೌಸ್ ಕಾಣಿಸುತ್ತವೆ.

ಕೃಪೆ : ಕನ್ನಡ ದುನಿಯಾ

Leave a Reply