300 ಕೋಟಿಯತ್ತ ‘ಟೈಗರ್ ಜಿಂದಾ ಹೈ’

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಟೈಗರ್ ಜಿಂದಾ ಹೈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಲೇ ಇದೆ.  ಚಿತ್ರ ಬಿಡುಗಡೆ ಯಾದ ದಿನದಿಂದ ಇಂದಿನವರೆಗೂ, 295.27 ಕೋಟಿ ಬಾಚಿದ್ದು, ವಾರಾಂತ್ಯ ದಲ್ಲಿ 300 ಕೋಟಿ ಸಂಗ್ರಹಿಸುವಲ್ಲಿ ಯಾವುದೇ ಸಂಶಯವಿಲ್ಲ.

2012ರ ‘ಏಕ್ ಥಾ ಟೈಗರ್’ ನ ಮುಂದುವರಿದ ಭಾಗವೆಂದೇ ಪರಿಗಣಿಸಲಾದ ಈ ಚಿತ್ರ ಆರಂಭದಿಂದಲೂ ತನ್ನ ಹವಾ ಸೃಷ್ಟಿಸು ತ್ತಲೇ ಬಂದಿದೆ.  ಈ ಮೂಲಕ ಸಲ್ಮಾನ್ ನಟನೆಯ 12 ನೇ ಚಿತ್ರ 100 ಕೋಟಿ ದಾಟಿದೆ. ಇನ್ನು ಭಜರಂಗಿ ಭಾಯಿಜಾನ್ (320 ಕೋ.) ಮತ್ತು ಸುಲ್ತಾನ್ (300 ಕೋ.) ಗಳಿಕೆ ಮೀರಿದರೆ, ಅದು ಜೀವಿತಾವಧಿಯ ಅತ್ಯಧಿಕ ಗಳಿಕೆಯಾಗಲಿದೆ ಎಂಬುದು ವಾಣಿಜ್ಯ ತಜ್ಞ ತರಣ್ ಆದರ್ಶ್ ಅವರು ನೀಡಿದ ಅಂಕಿ.

ಕೃಪೆ : ವಿಶ್ವವಾಣಿ

Leave a Reply