ಕನ್ನಡ ಸಿನಿಪ್ರಿಯರ ಕೆಂಗಣ್ಣಿಗೆ ಗುರಿಯಾದ ಕಿರುತೆರೆ ನಟಿ ಆಶಿತಾ

ಬಿಗ್ ಬಾಸ್ ಮನೆಗೆ ಹೋಗಿ ಜನಪ್ರಿಯತೆ ಗಿಟ್ಟಿಸಿಕೊಂಡ ಕಿರುತೆರೆ ನಟಿ ಆಶಿತಾ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಏನ್ ಮಾಡ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ಆದರೆ ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾ ಪೋಸ್ಟರ್ ಹಾಕಿಕೊಳ್ಳುವ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಶಿತಾ ಪೋಸ್ಟ್ ನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವರು ನಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲುಗು ನಟ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರದ ಪೋಸ್ಟರ್ ಹಾಕಿರುವ ಆಶಿತಾ’ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಕಾಯುವುದಕ್ಕೆ ಆಗ್ತಿಲ್ಲ ಎಂದು ಸ್ಟೇಟಸ್ ಹಾಕಿದ್ದರು. ತೆಲುಗು ಸಿನಿಮಾದ ಸ್ಟೇಟಸ್ ಹಾಕಿದ ಆಶಿತಾ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಹಲವರು ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ.

ಕನ್ನಡ ಸಿನಿಮಾಗಳ ಬಗ್ಗೆ ಪೋಸ್ಟ್ ಹಾಕಿಲ್ಲ, ಬದಲಿಗೆ ತೆಲುಗು ಸಿನಿಮಾದ ಪೋಸ್ಟ್ ಹಾಕಿದ್ದಾರೆ ಎಂದು ಹಲವರು ಆಶಿತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಆಶಿತಾ ‘ ನಾನು ಯಾವ ಸಿನಿಮಾ ಬೇಕಾದರೂ ನೋಡ್ತೀನಿ, ಸಿನಿಮಾಗೆ ಭಾಷೆಯ ಗಡಿಯಿಲ್ಲ. ಅದು ನನ್ನ ವೈಯಕ್ತಿಕ ವಿಚಾರ’ ಎಂದು ಎರಡನೇ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply