‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಪುನೀತ್

‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಇದ್ದಾರೆ ಎನ್ನುವ ದೊಡ್ಡ ಸುದ್ದಿ ಆಗಿತ್ತು. ಹಾಗಾದರೆ ಪುನೀತ್ ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಇದ್ದ ಕುತೂಹಲ. ಆದರೆ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ಪುನೀತ್ ರಾಜ್ ಕುಮಾರ್ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದಾರೆ. ವಿಶೇಷ ಅಂದರೆ ಪುನೀತ್ ರಾಜ್ ಕುಮಾರ್ ಇಲ್ಲಿ ತಮ್ಮ ಪಾತ್ರವನ್ನೇ ಅಂದರೆ ನಟ ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನಾಯಕ ಡ್ಯಾನಿಶ್ ಸೇಠ್ ಅಧಿತಿ ಆಗಿ ಹೋಗಿದ್ದ ಕಾರ್ಯಕ್ರಮದಲ್ಲಿ ಪುನೀತ್ ಮುಖ್ಯ ಅತಿಥಿ ಆಗಿರುತ್ತಾರೆ. ಎರಡ್ಮೂರು ನಿಮಿಷ ಪುನೀತ್ ಈ ಚಿತ್ರದಲ್ಲಿ ಇದ್ದರೂ ನೋಡುಗರಿಗೆ ಅದು ಖುಷಿ ನೀಡುತ್ತದೆ.

ಪುನೀತ್ ರಾಜ್ ಕುಮಾರ್ ಮತ್ತು ಡ್ಯಾನಿಶ್ ಸೇಠ್ ನಡುವೆ ನಡೆಯುವ ಸಂಭಾಷಣೆ ಚೆನ್ನಾಗಿದೆ. ಕಡಿಮೆ ಇದ್ದರೂ ಈ ಸೀನ್ ಸಿಕ್ಕಾಪಟ್ಟೆ ಸೂಪರ್ ಆಗಿದೆ. ಅಂದಹಾಗೆ, ಈಗಾಗಲೇ ಪುನೀತ್ ರಾಜ್ ಕುಮಾರ್ ಈ ಸಿನಿಮಾ ನೋಡಿ ಇಷ್ಟ ಪಟ್ಟಿದ್ದಾರೆ. ಇನ್ನು ಈ ಸಿನಿಮಾ ರಾಜಕೀಯ ವ್ಯವಸ್ಥೆಯ ಬಗ್ಗೆ ಇದೆ. ಹಾಗಂತ ಇಲ್ಲಿ ಉಪದೇಶ ಮಾಡಿಲ್ಲ. ಇದು ಪಕ್ಕಾ ಕಾಮಿಡಿ ಸಿನಿಮಾ. ಡ್ಯಾನಿಶ್ ಸೇಠ್ ನೋಡಿ ಇಷ್ಟ ಪಡುವವರಿಗೆ ಸಿನಿಮಾ ಪಕ್ಕಾ ಇಷ್ಟ ಆಗುತ್ತದೆ. ಯಾವುದೇ ತಲೆನೋವು ಇಲ್ಲದೆ ಎರಡು ಗಂಟೆ ನಕ್ಕು ನಕ್ಕು ಬರಬಹುದು. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಅದ್ಬುತ ಅಲ್ಲದಿದ್ದರೂ ಕನ್ನಡದ ಒಂದು ಅಪರೂಪದ ಸಿನಿಮಾ.

ಕೃಪೆ : ಫಿಲ್ಮಿ ಬೀಟ್

 

Leave a Reply