ಲಾಲ್ ಬಹದ್ದೂರ್ ಶಾಸ್ತ್ರೀಯವರ ರಹಸ್ಯ ಸಾವಿನ ಕಥೆ ಈಗ ‘ತಾಷ್ಕೆಂಟ್ ಫೈಲ್ಸ್’

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 52ನೆ ಪುಣ್ಯತಿಥಿಯಾದ ಜ.11ರಂದು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತನ್ನ ಹೊಸ ಚಿತ್ರದ ಬಗ್ಗೆ ಸುದ್ದಿ ನೀಡಿದ್ದಾರೆ. ಈ ಚಿತ್ರವು ಲಾಲ್ ಬಹದ್ದೂರ್ ಶಾಸ್ತ್ರೀಯವರ ರಹಸ್ಯ ಸಾವಿನ ಕಥೆಯನ್ನೊಳಗೊಂಡಿದ್ದು, ಚಿತ್ರಕ್ಕೆ ‘ತಾಷ್ಕೆಂಟ್ ಫೈಲ್ಸ್’ ಎಂದು ಹೆಸರಿಡಲಾಗಿದೆ.

ಚಿತ್ರದಲ್ಲಿ ಬಾಲಿವುಡ್ ದಿಗ್ಗಜರಾದ ನಾಸಿರುದ್ದೀನ್ ಶಾ ಹಾಗು ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಾಸಿರುದ್ದೀನ್ ಶಾ ಲಾಲ್ ಬಹದ್ದೂರ್ ಶಾಸ್ತ್ರೀಯವರ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ್ದ ನಂತರ 1966ರ ಜನವರಿ 11ರಂದು ಲಾಲ್ ಬಹದ್ದೂರ್ ಶಾಸ್ತ್ರೀ ಮೃತಪಟ್ಟಿದ್ದರು. ಅವರನ್ನು ವಿಷವುಣಿಸಿ ಕೊಲ್ಲಲಾಗಿತ್ತು, ಅವರ ಸಾವಿನ ಹಿಂದೆ ಪಿತೂರಿಯಿದೆ ಎನ್ನುವ ಶಂಕೆಗಳು ಇಂದಿಗೂ ಇವೆ. ಇದು ಈ ಚಿತ್ರದ ಕಥೆ ಎಂದು ಹೇಳಲಾಗಿದೆ.

“ನಾಸಿರುದ್ದೀನ್ ಶಾ ಹಾಗು ಮಿಥುನ್ ಚಕ್ರವರ್ತಿ ಇಬ್ಬರೂ ಈ ಚಿತ್ರದ ಪ್ರಮುಖ ಶಕ್ತಿ ಹಾಗು ಸ್ಪಷ್ಟ ಆಯ್ಕೆ. ದೀರ್ಘಕಾಲದ ನಂತರ ಇವರಿಬ್ಬರು ತೆರೆಯ ಮೇಲೆ ಬರಲಿದ್ದಾರೆ. ಇವರನ್ನು ಹೊಸ ಅವತಾರದಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ” ಎಂದು ವಿವೇಕ್ ಟ್ವೀಟ್ ಮಾಡಿದ್ದಾರೆ.

ಚೋಕೊಲೆಟ್, ಧನ್ ಧನಾ ಧನ್ ಗೋಲ್. ಬುದ್ಧ ಇನ್ ಟ್ರಾಫಿಕ ಜಾಮ್ ಹಾಗು ಜುನೂನಿಯತ್ ಚಿತ್ರಗಳನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.

ಕೃಪೆ : ವಾರ್ತ ಭಾರತೀ

Leave a Reply