ದಳಪತಿ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್

ಲವ್ಲಿಸ್ಟಾರ್ ಪ್ರೇಮ್ ನಟನೆಯ ದಳಪತಿ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದ್ದು, ಸಿನಿಮಾ ಫೆಬ್ರವರಿ 9 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಜೂಮ್ ಖ್ಯಾತಿಯ ಪ್ರಶಾಂತ್ ರಾಜ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಪ್ರೇಮ್ ಗೆ ನಾಯಕಿಯಾಗಿ ಕೃತಿ ಕರಬಂಧ ನಟಿಸಿದ್ದಾರೆ. ಇನ್ನೂ ಸಿನಿಮಾ ಯಾವುದೇ ಇತಿಹಾಸವನ್ನು ಹೇಳುವ ಸಿನಿಮಾ ಅಲ್ಲವಂತೆ. ನಾಯಕ ಪ್ರೀತಿಯನ್ನು ಕಾಯುವ ದಳಪತಿ. ಹಾಗಾಗಿ ಇದೇ ಟೈಟಲ್ ನ್ನು ಸಿನಿಮಾಕ್ಕೆ ಇಡಲಾಗಿದೆ. ಶೀರ್ಷಿಕೆಯೇ ಹೇಳುವಂತೆ ಇದು ಕ್ಲಾಸ್ ಮತ್ತು ಮಾಸ್ ಎರಡೂ ಬಗೆಯ ಪ್ರೇಕ್ಷ ಕರಿಗೆ ಇಷ್ಟವಾಗುವ ಸಿನಿಮಾವಾಗಿದೆಯಂತೆ.

ಕೃಪೆ : ಕನ್ನಡ ನ್ಯೂಸ್ ನೌ

 

Leave a Reply