ಖಾಸಗಿ ಸರ್ವೆ ಕುರಿತು ಮಾಜಿ ಸಂಸದೆ ರಮ್ಯಾ ನಿರ್ಧಾರ

ರಾಜ್ಯದಲ್ಲಿ ಚುನಾವಣೆ ನಡೆಯಲು ಕೆಲವೇ ತಿಂಗಳುಗಳು ಬಾಕಿ ಇದ್ದು, ರಮ್ಯಾ ಅವರು ತಮ್ಮ ಬಗ್ಗೆ ಜನರಲ್ಲಿರುವ ಅಭಿಪ್ರಾಯಗಳ ಬಗ್ಗೆ ಖಾಸಗಿ ಸಮೀಕ್ಷೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.

ತಮಗೆ ಸಿಕ್ಕಿರುವ ಸರ್ವೆ ಕುರಿತು ತಮ್ಮ ಆಪ್ತವಲಯರ ಬಳಿಯಲ್ಲಿ ಚರ್ಚೆ ನಡೆಸಿದ್ದಾರೆ. ಸಮೀಕ್ಷೆಯಲ್ಲಿ ಜನರು ರಮ್ಯಾ ಅವರ ಬಗ್ಗೆ ಸಕಾರಾತ್ಮಕವಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ರಮ್ಯಾ ಅವರು ಸಕ್ರಿಯ ರಾಜಕಾರಣಕ್ಕೆ ಮತ್ತೆ ವಾಪಸ್ಸು ಬರುವುದಕ್ಕೆ ಮನಸು ಮಾಡಿದ್ದಾರೆ ಎನ್ನಲಾಗಿದೆ.

ಡೆಲ್ಲಿ ಮೂಲದ ಎರಡು ಖಾಸಗಿ ಸಮೀಕ್ಷ ಕಂಪನಿಗಳು ಸಮೀಕ್ಷೆ ನಡೆಸಿದ್ದಾವೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ನಟಿ ರಮ್ಯಾ ರಾಜ್ಯದ ರಾಜಕಾರಣಕ್ಕೆ ವಾಪಸ್ಸು ಬರುವುದರ ಕಡೆಗೆ ಮನಸ್ಸು ಮಾಡುತಿದ್ದು ಮೈಸೂರು ಅಥವಾ ಮಂಡ್ಯ ಲೋಕಸಭಾ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿದೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply