ಕಾಂಗ್ರೆಸ್ ನಲ್ಲಿ ಬಿನ್ನಾಭಿಪ್ರಾಯ ಇಲ್ಲ ಸಿದ್ದರಾಮಯ್ಯ ನಮ್ಮ ಲೀಡರ್ : ಡಿ ಕೆ ಎಸ್

ಚಿತ್ರದುರ್ಗ: ಪಾವಗಡದ ಸೋಲಾರ್ ಪಾರ್ಕ್ ನೋಡಿ‌ ಮೋದಿ ಗಾಬರಿಯಾಗಿದ್ದರು ಎಂದು, ಡಿಕೆ ಶಿವಕುಮಾರ್ ಹೇಳಿದ್ದಾರೆ. ಚಿತ್ರದುರ್ಗದ ಹೊಸದುರ್ಗದಲ್ಲಿ ವಿದ್ಯುತ್ ಉಪ ಕೇಂದ್ರಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಮೀನು ಖರೀದಿ ಮಾಡದೇ, ಭೂ ಸ್ವಾದೀನವೂ ಇಲ್ಲದೆ‌, 12 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಆಗುತ್ತಿದೆ. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ‌ ಸಿದ್ಧವಾಗುತ್ತಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ‌ಮನಸ್ಸಿಲ್ಲ. ಪ್ರಕಾಶ್ ಜಾವಡೆಕರ್ ರಾಜ್ಯದ ಸಾಲ ಮನ್ನಾವನ್ನು‌ ಲಾಲಿಪಪ್ ಎಂದಿದ್ದಾರೆ. 50 ಸಾವಿರ‌ ಲಾಲಿಪಪ್ ಏನ್ರಿ. ನೀವು‌ ಕೇಂದ್ರದವರು ಕನಿಷ್ಟ ಚಾಕೊಲೇಟ್‌ ಆದ್ರೂ ಕೊಡಿ ಎಂದು ಕುಟುಕಿದರು.

ಬಿಜೆಪಿಯವರು ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ, ಅಧಿಕಾರ ಇದ್ದಾಗ ಜೈಲಿಗೆ ಹೋಗಿ, ಬ್ಲೂಫಿಲಂ ನೋಡಿ ಅಂತಾ ಯಾರಾದರೂ ಹೇಳಿದ್ದರಾ, ಯಡಿಯೂರಪ್ಪ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ‌ ಎನ್ನುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಏನು ಹೇಳುತ್ತಿಲ್ಲ. ಗುರುತಿಸುವಂತಾ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬರೋದಿಕ್ಕಿಂತ ಮೊದಲಿಂದಲೂ‌ ನಾನು ಗೋವಿಂದಪ್ಪ ಸ್ನೇಹಿತರು. ಅವರನ್ನು ವಿಧಾನಸೌಧದಲ್ಲಿ ನನ್ನ ಪಕ್ಕದ ಕಚೇರಿಯಲ್ಲಿ ಕೂರಿಸಿಕೊಳ್ಳುವ ಆಸೆ. ಆದ್ರೆ, ಯಾಕೋ ಆಗ್ತಾ ಇಲ್ಲ. ಈ‌ ಚುನಾವಣೆ ಮುಗಿಲಿ‌ ನೋಡೋಣ. ನಾನು 6 ಸಲ ಗೆದ್ದಿದ್ದೇನೆ, ಗೋವಿಂದಪ್ಪನನ್ನು ಗೆಲ್ಲಿಸಿ, ನಿಮ್ಮ ಕೆಲಸ ಮಾಡಿದ್ದೇವೆ ಕೂಲಿ ಕೊಡಿ‌ ಅಂತಾ ಕೇಳೊಕೆ ಬಂದಿದ್ದೇನೆ. ನಾನು ಕಳಂಕಿತ ಅಂತಾ ದೂರು ಕೊಟ್ಟ ಕಾರಣಕ್ಕೆ ಆರಂಭದಲ್ಲಿ ಸಚಿವನಾಗಲಿಲ್ಲ. ಕಷ್ಟವಾದ ಇಲಾಖೆ‌ ನಿಭಾಯಿಸಿಯೇ‌ ಮೇಲೆ ಹೋಗಬೇಕು‌ ಎಂಬ ಕಾರಣಕ್ಕೆ ಇಂಧನ ಇಲಾಖೆ ವಹಿಸಿಕೊಂಡೆ, ಆದರೆ ಅನೇಕರು ಶೋಭಕ್ಕ ಉಗಿಸಿಕೊಂಡಿದ್ದು ಆಯ್ತು ಇನ್ನೂ ನೀನು ಯಾಕೆ‌ ಆ ಇಲಾಖೆ ತಗೊಳ್ತಿಯಾ ಅಂದಿದ್ದರು ಎಂದು ನೆನಪಿಸಿಕೊಂಡರು.

ಸಿದ್ದರಾಮಯ್ಯ ನಮ್ಮ ಲೀಡರ್, ಅವರ ನಾಯಕತ್ವದಲ್ಲೇ ಚುನಾವಣೆ. ನಮ್ಮಲ್ಲಿ ಮೂಲ, ವಲಸೆ ಕಾಂಗ್ರೆಸ್ ಗೊಂದಲ ಇಲ್ಲ. ಮಹದಾಯಿ ವಿಚಾರದಲ್ಲಿ‌ ನಾವು ಕಾನೂನು ಬಿಟ್ಟು ಏನು ಮಾಡಿಲ್ಲ. ಗೋವಾ ಸಚಿವ ಪ್ಯಾಲೆಕರ್ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ ಎಂದರು. ಕೊರಟಗೆರೆ ಬಿಜೆಪಿ ಅಭ್ಯರ್ಥಿ ಪರಮೇಶ್ವರ್ ಗೆ ಅವಾಚ್ಯ ಶಬ್ದಗಳಿಂದ ಬೈದಿರುವದು ಬಿಜೆಪಿ ಸಂಸ್ಕೃತಿ ಎಂದರು.

Leave a Reply