‘ಮಾಸ್ಟರ್ ಪೀಸ್’ ಖ್ಯಾತಿಯ ಮಂಜು ಮಾಂಡವ್ಯ ರವರ ಮುಂದಿನ ಚಿತ್ರ ರಿವೀಲ್

ಯಶ್, ಸಾನ್ವಿ ಅಭಿನಯದಲ್ಲಿ ಮೂಡಿ ಬಂದಿದ್ದ, ಬ್ಲಾಕ್ ಬ್ಲಸ್ಟರ್ ಹಿಟ್ ಚಿತ್ರದ ಭರವಸೆಯ ನಿರ್ದೇಶಕರು ಎನಿಸಿಕೊಂಡ ಮಂಜು ಮಾಂಡವ್ಯರವರು ಯಾವ ಚಿತ್ರವನ್ನು ಕೈಗೊಳ್ಳುತ್ತಾರೆ ಎಂಬ ಕುತೂಹಲವಿತ್ತು.
manju2.jpg

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐವತ್ತನೇಯ ಚಿತ್ರಕ್ಕೆ ಮಂಜು, ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಮಂಜು ಅವರು ಇದಕ್ಕೆಲ್ಲ ಬ್ರೇಕ್ ನೀಡಿ ಸ್ಪಷ್ಟಿಕರಣ ನೀಡಿದ್ದು, ಈಗ ಐಶ್ವರ್ಯ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಮಂಜು ಅವರೇ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಕುಚಿಕು ಗೆಳೆಯ ಚಿಕ್ಕಣ್ಣ ಸಹ ಸಾಥ್ ನೀಡಿದ್ದಾರೆ.

ಚಿತ್ರಕ್ಕೆ “ಶ್ರೀ ಭರತ ಬಾಹುಬಲಿ” ಎಂಬ ಹೆಸರಿಟ್ಟಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಮಣಿಕಾಂತ ಕದ್ರಿ ಸಂಗೀತ ನೀಡಿದ್ದು, ಕೆ ಏಂ ಪ್ರಕಾಶ ಸಂಕಲನವಿದೆ..

ಕೃಪೆ : ಬಾಲ್ಕನಿ ನ್ಯೂಸ್

Leave a Reply